ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲಿಗೆ ಹೋದರೂ ಅಲ್ಲಿ ಅವರ ಗನ್‌ಮ್ಯಾನ್ ಚಲಪತಿ ಇದ್ದೇ ಇರುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ, ಅಪ್ಪು ಅಭಿಮಾನಿಗಳಿಗೆ ಚಲಪತಿ ಹೆಸರು ಹೊಸದೇನು ಅಲ್ಲ. ಸದಾ ಪವರ್‌ಸ್ಟಾರ್ ಹಿಂದೆ ನಿಂತಿರುತ್ತಿರುದ್ದ ಆಜಾನುಬಾಹು ವ್ಯಕ್ತಿ.
ಅಪ್ಪು ವ್ಯಕ್ತಿತ್ವದಂತೆಯೇ ಗನ್‌ಮ್ಯಾನ್ ಚಲಪತಿ ವ್ಯಕ್ತಿತ್ವವೂ ಮಾರ್ಪಾಡಾಗಿತ್ತು.
ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ಚಲಪತಿ ಕೂಡ ನೋವಿನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೆನಪನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಚಲಪತಿ ದಿಢೀರನೇ ಅಪ್ಪು ಅರಮನೆಯನ್ನು ತೊರೆದಿದ್ದಾರೆ. ಕೆಲಸ ಬಿಟ್ಟು ಊರು ಸೇರಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಹಲವು ವರ್ಷಗಳಿಂದ ಚಲಪತಿ ಗನ್ ಮ್ಯಾನ್ ಆಗಿದ್ದರು. ಅಪ್ಪು ಎಲ್ಲಿಗೆ ಹೋದರೂ, ಅವರಿಗೆ ಬೆಂಗಾವಲಾಗಿ ಚಲಪತಿ ಇರುತ್ತಿದ್ದರು. ಚಲಪತಿ ಇದ್ದಾರೆ ಅಂದರೆ, ಅಪ್ಪು ಕೂಡ ಆರಾಮಾಗಿ ಇವೆಂಟ್‌ಗಳಲ್ಲಿ, ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿರುತ್ತಿದ್ದರು. ಈಗ ಅಪ್ಪುನೇ ಇಲ್ಲ. ಅದಕ್ಕೆ ನೋವಿನಿಂದಲೇ ಅನ್ನ ಕೊಟ್ಟ ಅರಮನೆಯನ್ನು ಒಲ್ಲದ ಮನಸ್ಸಿನಿಂದ ತೊರೆದಿದ್ದಾರೆ.
ಯಾರಿಗೂ ಗನ್‌ಮ್ಯಾನ್ ಗಲ್ಲಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಗನ್‌ಮ್ಯಾನ್ ಅನ್ನು ಎಂದಿಗೂ ಕೆಲಸಗಾರರಂತೆ ನೋಡಿದ್ದಿಲ್ಲ. ತಮ್ಮ ಮನೆಯವರಂತೆಯೇ ನೋಡಿಕೊಂಡಿದ್ದರು. ಈಗ ಆ ಮನೆಯಲ್ಲಿ ಅಪ್ಪುನೇ ಇಲ್ಲ. ಹೀಗಿದ್ದರೂ, ಕಳೆದ 6 ತಿಂಗಳಿನಿಂದ ನೋವಿನಿಂದಲೇ ಕೆಲಸ ಮಾಡುತ್ತಿದ್ದರು. ಅದ್ರೀಗ ಆ ಮನೆಯನ್ನು ತೊರೆದಿದ್ದು, ಮುಂದೆ ಕನ್ನಡದ ಯಾವುದೇ ಹೀರೊ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.