ಬೆಳಗಾವಿಯ ಟಿಳಕವಾಡಿಯ ಬುಧವಾರ ಪೇಟ ಹಾಗೂ ಗುರುವಾರ ಪೇಟಗಳಲ್ಲಿ ಸಾರ್ವಜನಿಕರಿಗೆ ಡ್ರೈನೇಜ್ ಪೈಪ್‍ಲೈನ್ ಸಮಸ್ಯೆಯಿಂದಾಗಿ ಸಾಕಷ್ಟು ತೊಂದರೆಯಾಗಿತ್ತು. ಈ ಸಮಸ್ಯೆಗಳನ್ನು ಅರಿತ ನಗರಸೇವಕರಾದ ನಿತಿನ್ ಜಾಧವ್ ಕೂಡಲೇ ಸಮಸ್ಯೆಯನ್ನು ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ನಗರದ ಟಿಳಕವಾಡಿಯ ಬುಧವಾರ ಪೇಟ ಹಾಗೂ ಗುರುವಾರ ಪೇಟಗಳಲ್ಲಿ ಡ್ರೈನೇಜ್ ಪೈಪ್‍ಲೈನ್ ಬ್ಲಾಕ್ ಆಗಿ ಅಕ್ಕಪಕ್ಕದ ಮನೆಯಗಳ ಬಾವಿಯಲ್ಲಿ ಈ ಡ್ರೈನೇಜ್ ನೀರು ಸೇರುತ್ತಿತ್ತು. ಈ ಕುರಿತಂತೆ ಸ್ಥಳೀಯರು ನಗರ ಸೇವಕರಾದ ನಿತಿನ್ ಜಾಧವ್‍ರವರಿಗೆ ತಿಳಿಸಿದ್ದರು. ಈ ಕುರಿತಂತೆ ನಿತಿನ್ ಜಾಧವ್ ಬೆಳಗಾವಿಯ ದಕ್ಷಿಣ ಶಾಸಕರಾದ ಅಭಯ್ ಪಾಟೀಲ್ ರವರಿಗೆ ತಿಳಿಸಿದ್ದರು.
ಶಾಸಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಡ್ರೈನೇಜ್ ಪೈಪ್‍ನ್ನು ಬದಲಾಯಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಕಾಮಗಾರಿಯನ್ನು ಪ್ರಾರಂಭಿಸಿದರು. ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಿದ್ದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.