Breaking News

ಬೆಳಗಾವಿ ಖಾಸಗಿ ವ್ಯಕ್ತಿಗಳ ಜಾಗೆಯಲ್ಲಿ KUWSನಿಂದ ವಾಟರ್ ವಾಲ್ವ್

Spread the love

ಬೆಳಗಾವಿ ಶಿವಾಜಿ ನಗರದ 5ನೇ ಮುಖ್ಯರಸ್ತೆಯಲ್ಲಿ ಸುನೀಲ್ ಗಂಗಾಧರ ಗರದೆ ರವರ ಜಾಗೆಯಲ್ಲಿ ಕೆಯುಡಬ್ಲುಎಸ್ ಕುಡಿಯುವ ನೀರಿನ ವಾಲ್ವ್‍ನ್ನು ಅಜಾಗರೂಕತೆಯಿಂದಾಗಿ ಹಾಕಲಾಗಿದ್ದು ಅದರಿಂದ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಅಚಾತುರ್ಯದಿಂದ ಹಾಕಲಾದ ಈ ವಾಲ್ವ್‍ನ್ನು ತೆರವುಮಾಡಬೇಕೆಂದು ಎಲ್ ಆಂಡ್ ಟಿ ಅಧಿಕಾರಿಗಳಿಗೆ ಮನವು ಮಾಡಿದ್ದಾರೆ.

ಹೌದು ಸುನೀಲ್ ಗಂಗಾಧರ ಗರದೆ ಬೆಳಗಾವಿಯ ಶಿವಾಜಿನಗರದ ನಿವಾಸಿ. ಈ ಹಿಂದೆ ಕೆಯುಡಬ್ಲುಎಸ್ ಅಧಿಕಾರಿಗಳಿ ಕುಡಿತಯವ ನೀರಿನ ಪೈಪ್‍ಲೈನ್‍ನ್ನು ಅಳವಡಿಸುವ ವೇಳೆ ಇವರ ಜಾಗೆ ಸಿಟಿಎಸ್ 10208-10211 ಆಟೋ ಎಲ್‍ಪಿಜಿ ಪೆಟ್ರೋಲ್ ಬಂಕ್ ಆರ್‍ಟಿಓ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‍ಲೈನ್‍ನ ವಾಲ್ವ್‍ನ್ನು ಸುನೀಲ್ ಗರದೆ ರವರ ಜಾಗೆಯಲ್ಲಿ ಅಳವಡಿಸಿದ್ದಾರೆ.

ಈಗ ಅದರಿಂದ ಯಾವಾಗಲೂ ನೀರು ಹರಿಯುತ್ತಿದ್ದು ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ನಾವು ನಮ್ಮ ಜಾಗೆಯಲ್ಲಿ ಕಟ್ಟಡ ಕಾಮಗಾರಿಯನ್ನು ನಡೆಸಲು ಯೋಜಿಸಿದ್ದು, ಕೂಡಲೇ ಈ ವಾಲ್ವ್‍ನ್ನು ಸ್ಥಳಾಂತರ ಮಾಡಬೇಕೆಂದು ಸುನೀಲ್‍ರವರು ಕೆಯುಡಬ್ಲುಎಸ್ ಹಾಗೂ ಎಲ್ ಆಂಡ್‍ಟಿ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ