ಗೋಕಾಕ್ :ವೈದ್ಯೋ ನಾರಾಯಣ ಹರಿ ಎಂದು ನಾವೆಲ್ಲಾ ನಂಬಿದ್ದೇವೆ. ಆದರೆ ಇಲ್ಲಿನ ವೈದ್ಯರು ಹಣ ನೀಡಿದ್ರೆ ಮಾತ್ರ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗೋಕಾಕ್‍ನ ಸರಕಾರಿ ಆಸ್ಪತ್ರೆಯಲ್ಲಿಯೇ ಈ ರೀತಿ ಘಟನೆ ಬೆಳಕಿಗೆ ಬಂದಿದೆ. ಹಣವಂತರು ತಮ್ಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ ಬಡವರು, ನಿರ್ಗತಿಕರಿಗೆ ಸರಕಾರಿ ಆಸ್ಪತ್ರೆಯೇ ಆಧಾರ.
ಹಾಗಿರುವಾಗ ಸರಕಾರಿ ಆಸ್ಪತ್ರೆಯಲ್ಲಿಯೆ ದಿನಾಲು ಚಿಕಿತ್ಸೆಗೆ ಮತ್ತು ಹೆರಿಗೆ ಮಾಡಿಸಿಕೊಳ್ಳಲು ಬರುವ ರೋಗಿಗಳ ಕುಟುಂಬದವರ ಹತ್ತಿರ ಆಶಾ ಕಾರ್ಯಕರ್ತರು ಯಾವ ರೀತಿ ಹಣ ವಸೂಲಿ ಮಾಡುತಿದ್ದಾರೆಂದರೆ. ಇದೇನು ಸರಕಾರಿ ಆಸ್ಪತ್ರೆನಾ ಅಥವಾ ಖಾಸಗಿ ಆಸ್ಪತ್ರೆನಾ ತಿಳಿಯುತ್ತಿಲ್ಲ, ಗರ್ಬಿಣಿಯೊಬ್ಬರು ಹೆರಿಗೆಗೆ ಅಂತ ಬಂದರೆ ಆಶಾ ಕಾರ್ಯಕರ್ತೆಯೊಬ್ಬಳು ಹೆರಿಗೆ ಮಾಡಿಸಲಿಕ್ಕೆ ಹಣ ವಸೂಲಿ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ಹಣ ಆಶಾ ಕಾರ್ಯಕರ್ತೆಗೆನಾ ಅಥವಾ ಅವರ ಮುಖಾಂತರ ವೈದ್ಯರು ವಸೂಲಿ ಮಾಡುತಿದ್ದಾರಾ ಅನ್ನೊದು ತಿಳಿಯುತ್ತಿಲ್ಲಾ..?
ಎನೇ ಆಗಲಿ ಸರಕಾರದ ಹತ್ತಿರ ನಮಗೆ ಅದನ್ನು ಕೊಡಿ ಇದನ್ನು ಕೋಡಿ ಅಂತ ಪ್ರತಿಭಟನೆ ಮಾಡೊ ಈ ಆಶಾ ಕಾರ್ಯಕರ್ತರಿಗೆ ಸರಕಾರ ನೀಡುತ್ತಿರುವ ಗೌರವಧನ ಸಾಕಾಗಿಲ್ಲ ಅಂತ ಕಾಣುತ್ತದೆ, ಅದಕ್ಕೆ ಈ ರೀತಿ ಹೇರಿಗೆಗೆ ಬರುವವರ ಹತ್ತಿರ ನಿರ್ಭಯವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇಷ್ಟಾದರೂ ಸಹ ಇಲ್ಲಿನ ವೈದ್ಯಾಧಿಕಾರಿಗಳು ಇವರ ಮೇಲೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ, ಇದರಿಂದ ಇದರಲ್ಲಿ ಇವರು ಭಾಗಿಯಾಗಿದ್ದಾರಾ ಎಂಬ ಸಂಶಯ ಮೂಡಿದೆ