ಬೆಂಗಳೂರು: ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಮತ್ತೆ ವಾಗ್ವಾದ ತಾರಕಕ್ಕೆ ಏರಿದ್ದು “ಆ ಗಂಡಿಗೆ ಉತ್ತರ ಕೊಡುತ್ತೇನೆ” ಎಂದು ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದ ಅಶ್ವತ್ಥನಾರಾಯಣ, ಡಿ.ಕೆ.ಶಿವಕುಮಾರ್ ಗೆ ಇಡಿ, ಐಟಿ ಅನುಭವ ಚೆನ್ನಾಗಿದೆ. ಅವರು ತಿಹಾರ್ ಕಡೆ ಪ್ರಯಾಣ ಬೆಳೆಸಬೇಕು ಎಂದು ವ್ಯಂಗ್ಯವಾಡಿದ್ದರು. ಇದರಿಂದ ಕೆರಳಿರುವ ಶಿವಕುಮಾರ್, ‘ಆ ಗಂಡಿಗೆ ಉತ್ತರ ನೀಡುತ್ತೇನೆ’ ಎಂದಿದ್ದಾರೆ.
ದೇಶದಲ್ಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅತ್ಯಂತ ಭ್ರಷ್ಟ. ಪ್ರತಿಯೊಂದು ಹುದ್ದೆಗೂ ಲಂಚ ಕೊಡಲೇಬೇಕು. ಪಿಎಸ್‌ಐ ಪ್ರಕರಣ ಹೊರಬಂದ ಕಾರಣ ಮತ್ತೊಂದು ಪ್ರಕರಣ ಮುಚ್ಚಿ ಹಾಕಿದ್ದಾರೆ.