ಸರಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ಅಕೌಂಟ್‍ಗೆ ಹಣ ಹಾಕುವಂತೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಎಸಿಬಿ ಅಧಿಕಾರಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಾವು ಎಸಿಬಿ ಅಧಿಕಾರಿಗಳೆಂದು ನಂಬಿಸಿ ಸರಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದ ಮೂವರು ಖದೀಮರನ್ನು ಬೆಳಗಾವಿಯ ಸಿಎಎನ್ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರ್‍ಪಡಿಸಿದ್ದಾರೆ.
ಬಂಧಿತರನ್ನು ಚಿಕ್ಕೋಡಿಯ ಸದಲಗಾ ಮೂಲದ 56ವರ್ಷದ ಮುರಗೆಪ್ಪ ನಿಂಗಪ್ಪ ಪೂಜಾರ್, ಬಸ್ತವಾಡ ಶಿರೋಳ್ ಕೊಲ್ಹಾಪೂರ್‍ದ ರಾಜೇಶ್ ಚೌಗುಲೆ, ಹಾಸನದ ಸಕಲೇಶ್‍ಪುರ ತಾಲೂಕಿನ ರಜನೀಕಾಂತ್ ಎಂಬ ಮೂರವರು ಖದೀಮರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಆರ್‍ಟಿಒ, ಸಬ್‍ರಜಿಸ್ಟಾರ್, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ತಾವು ಏಸಿಬಿ ಅಧಿಕಾರಿಗಳು ನಮ್ಮ ಖಾತೆಗೆ ದುಡ್ಡು ಹಾಕದಿದ್ದರೆ ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡುವುದಾಗಿ ಬೆದರಿಸಿ ಹಲವಾರು ಜನ ಅಧಿಕಾರಿಗಳನ್ನು ವಂಚಿಸಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾರೆ.