ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟಿದ್ದಾರೆ. ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಬೆಳಗಾವಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣೆಯಲ್ಲಿ ಹಣ ಹಂಚಿದ್ರು, ಹೆಂಡಾ ಹಂಚಿದ್ರು ಅನ್ನೋಕಿಂತಲೂ. ವಿಧಾನಸಭೆಯಲ್ಲಿ ಜೆಡಿಎಸ ಶಾಸಕ ಶ್ರೀನಿವಾಸ ಅವರೇ ಹೇಳಿದ್ರು. ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ಬೀಳಿಸಲು ವಿಶ್ವನಾಥ ಎನ್ನುವವರು ಮನೆಗೆ ಹೋಗಿ 5 ಕೋಟಿ ನೀಡಿ ತಮ್ಮೊಂದಿಗೆ ಬರುವಂತೆ ಆಮಿಷ ತೋರಿಸಿದ್ರು. ಇನ್ನು ಯಾರೋ ಮಾಜಿ ಮಂತ್ರಿಗಳು ಸರ್ಕಾರ ತರಬೇಕಾದ್ರೆ 11 ಕೋಟಿ ಸಾಲ ತರಬೇಕಾಯ್ತು ಅಂತಾ ಹೇಳಿದ್ರು. ಅಧಿಕಾರಕ್ಕಾಗಿ ಹಣವನ್ನ ಖರ್ಚು ಮಾಡಿದವರು ಅವರು. ಇಂತಹ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡಿದ್ದಾರೆ. ಈ ರೀತಿ ಆರೋಪ ಮಾಡುವುದು ಬಾಲಿಶ ಅನಿಸುತ್ತದೇ ಎಂದು ಕಿಡಿಕಾರಿದರು.
ವಾಯುವ್ಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ವಾತಾವರಣವಿದೆ. ಪ್ರಜಾಪ್ರಭುತ್ವದಲ್ಲಿ ಅತ್ಯಂತ ಹರಿತವಾದ ಹಕ್ಕು ಅಂದ್ರೆ ಅದು ಮತದಾನದ ಹಕ್ಕು. ಶಿಕ್ಷಕರು ಪ್ರಕಾಶ ಹುಕ್ಕೇರಿ ಪರವಾಗಿ ಒಲವನ್ನು ತೋರಿಸಿದ್ದಾರೆ. ಶಿಕ್ಷಕರ, ಪದವೀಧರ ಕ್ಷೇತ್ರ ಎರಡು ಗೆಲ್ಲುವ ಭರವಸೆಯಿದೆ. ಅದರಲ್ಲೂ ಶಿಕ್ಷಕರ ಕ್ಷೇತ್ರ ಗೆಲ್ಲೋ ಕಾಂಪಿಡೇನ್ಸ್ ಇದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.ಇನ್ನು ಪ್ರಕಾಶ ಹುಕ್ಕೇರಿ ಎಸ್ಸೆಸ್ಸೆಲ್ಸಿ ಫೇಲ್ ಎಂದು ಪ್ರಭಾಕರ ಕೋರೆ ಲೇವಡಿ ಮಾಡಿದ್ದ ವಿಚಾರಕ್ಕೆ ಪ್ರಕಾಶ ಹುಕ್ಕೇರಿ ಅವರು ಎಸ್ಸೆಸ್ಸೆಲ್ಸಿ ಪಾಸೋ ಫೇಲೋ ಗೊತ್ತಿಲ್ಲ. ಆದ್ರೆ ಜನರು, ರಾಜಕೀಯ, ಚುನಾವಣೆ ಪರೀಕ್ಷೆಯಲ್ಲಿ 8 ಬಾರಿ ಗೆದ್ದು ಜನರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.