ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿಯು ತನ್ನ ಪ್ರಸಿದ್ಧ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ (IE) ಗೆ ನಿವೃತ್ತಿ ಘೋಷಿಸಿದೆ. ಈ ಹಿಂದೆ ಕಳೆದ ವರ್ಷವೇ ಈ ಕುರಿತು ಸುದ್ದಿಗಳು ಹರಿದಾಡಿದ್ದವು.
ಪ್ರಸ್ತುತ ಇಂಟರ್‌ನೆಟ್ ಎಕ್ಸ್ ಪ್ಲೋರರ್‌ಅನ್ನು ಜೂನ್15 ರಿಂದ ಸಂಪೂರ್ಣವಾಗಿ ನಿವೃತ್ತಗೊಳಿಸುತ್ತಿರುವುದಾಗಿ ಹೇಳಿದೆ.
ಇದರ ಬದಲಾಗಿ ಕ್ರೋಮಿಯಂ-ಆಧಾರಿತ ಎಡ್ಜ್ ಅನ್ನು ವಿಂಡೋಸ್ ಪಿಸಿಗಳಿಗೆ ಪ್ರಾಥಮಿಕ ಬ್ರೌಸರ್ ಆಗಿ ಮಾರ್ಪಡಿಸಲಾಗುತ್ತದೆ. ಪ್ರಸ್ತುತ ಜನರೇಷನ್ನಿನ ವಿಂಡೋಸ್ ಎಡ್ಜ್ ಬ್ರೌಸರ್ “ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ಗಿಂತ ವೇಗವಾದ, ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಆಧುನಿಕ ಬ್ರೌಸರ್” ಎಂದು ಮೈಕ್ರೋಸಾಫ್ಟ್ ಹೇಳಿದೆ.
ಆದ್ದರಿಂದ ಜೂ.15ರ ನಂತರ ಎಲ್ಲಾ ವಿಂಡೋಸ್ ಪಿಸಿಗಳು ಇಂಟರ್ನೆಟ್ ಎಕ್ಸ್‌ಪ್ಲೋರರ್ (IE) ಅನ್ನು ಸಪೋರ್ಟ್ ಮಾಡುವುದಿಲ್ಲ. ಬಳಕೆದಾರರು ತಮ್ಮ ಡೆಸ್ಕ್‌ಟಾಪ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಚಲಾಯಿಸಲು ವಿಫಲರಾಗುತ್ತಾರೆ ಎಂಬುದು ಖಚಿತವಾಗಿದೆ. ಹೆಚ್ಚು ಸುರಕ್ಷಿತ ವೆಬ್ ಬ್ರೌಸಿಂಗ್ ಅನುಭವಕ್ಕಾಗಿ ಮೈಕ್ರೋಸಾಫ್ಟ್ ಬಳಕೆದಾರರಿಗೆ Microsoft Edge ಅನ್ನು ಶಿಫಾರಸು ಮಾಡುತ್ತಿದೆ. ಜೂ.15ರ ನಂತರ IE ಯಿಂದ ಎಡ್ಜ್‌ಗೆ ಸ್ವಯಂಚಾಲಿತ ಮರುನಿರ್ದೇಶನವನ್ನು ಮಾಡಲಾಗುತ್ತದೆ ಎಂದು ರೆಡ್‌ಮಂಡ್, ವಾಷಿಂಗ್‌ಟನ್ ಮೂಲದ ಟೆಕ್ ದೈತ್ಯ ʼಮೈಕ್ರೋಸಾಫ್ಟ್ʼ ಸ್ಪಷ್ಟ ಪಡಿಸಿದೆ ಎನ್ನಲಾಗಿದೆ.