ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದ ಶಾರದಾ ಹೈಸ್ಕೂಲ್‌ಗೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹಾಗೂ ಮಹಿಳಾ ಪಿಎಸ್‌ಐ ಕವಿತಾ ಬಂದಿದ್ದು, ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಚುನಾವಣಾಧಿಕಾರಿ ಮಾಡಿದ ಆದೇಶವನ್ನು ತಮ್ಮ ಬೆಂಬಲಿಗರು ಪಾಲನೆ ಮಾಡುತ್ತಿಲ್ಲ, ಮತಗಟ್ಟೆ ಕೇಂದ್ರದಿಂದ 200 ಮೀಟರ್ ದೂರದಲ್ಲಿರಬೇಕು ಎಂದು ಪಿಎಸ್‌ಐ ಹೇಳುತ್ತಿದ್ದಂತೆ ಹೊರಟ್ಟಿ ಅವರು ಪಿಎಸ್‌ಐ ಕವಿತಾ ಅವರಿಗೆ, ಯಾರ‍್ರೀ ಅವಾ ಡಿಸಿ? ಎಂದು ಆವಾಜ್ ಹಾಕಿದ್ದಾರೆ.
1 ಟೇಬಲ್ ಹಾಗೂ 2 ಖುರ್ಚಿಗಳನ್ನು ಹಾಕಿಕೊಂಡು ಕುಳಿತುಕೊಳ್ಳಲು ಅವಕಾಶ ಇದೆ. ಜಾಸ್ತಿ ಜನ ಕುಳಿತುಕೊಳ್ಳುವಂತಿಲ್ಲ ಎಂದು ಡಿಸಿ ಹೇಳಿದ್ದಾರೆ ಎಂದು ಪಿಎಸ್‌ಐ ಹೇಳುತ್ತಿದ್ದಂತೆ ಹೊರಟ್ಟಿ ಯರ‍್ರೀ ಅವಾ ಡಿಸಿ ಎಂದು ಆವಾಜ್ ಹಾಕಿದ್ದಾರೆ
Laxmi News 24×7