Breaking News

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಗೆಲ್ಲುತ್ತದೆ ಎಂದ ಜೆಡಿಎಸ್ ಎಂಎಲ್‌ಸಿ

Spread the love

 ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.

ಮಾದೇಗೌಡ ಗೆಲ್ಲುತ್ತಾರೆ ಎಂದು ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

ಆಪ್ತ ಕೀಲಾರ ಜಯರಾಂ ಅವರಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರ ವಿರುದ್ಧ ಸಿಡಿದೆದ್ದಿರುವ ಮರಿತಿಬ್ಬೇಗೌಡ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ.

ಇಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್‌ನ ಮಧು ಮಾದೇಗೌಡ ಗೆದ್ದೇ ಗೆಲ್ತಾರೆ. ಕ್ಷೇತ್ರದಲ್ಲಿ ಅವರ ಪರವಾದ ಅಲೆ ಇದೆ. ನಾನೇಕೆ ಮಧು ಅವರನ್ನ ಬೆಂಬಲಿಸಿದೆ ಎಂಬುದು ಮತದಾರರಿಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಪಕ್ಷದ ಕೆಲ ಆಂತರಿಕ ವಿಚಾರಗಳನ್ನು ಈಗ ಮಾತನಾಡಲು ಬಯಸುವುದಿಲ್ಲ ಎಂದರು.

ಒಕ್ಕಲಿಗರ ಮತಗಳು ಜೆಡಿಎಸ್‌ಗೇ ಮೀಸಲಿರುತ್ತವೆ ಎಂದು ನಾನು ಹೇಳುವುದಿಲ್ಲ. ಹಿಂದೆ ಬೇರೆ ಸಮುದಾಯದವರು ಗೆದ್ದಿರುವ ಉದಾಹರಣೆ ಇದೆ. ಈ ಬಾರಿ ಕಣದಲ್ಲಿರುವ ಮೂರ್ನಾಲ್ಕು ಮಂದಿ ಒಕ್ಕಲಿಗ ಸಮಾಜದವರೇ ಆಗಿದ್ದಾರೆ. ಎಲ್ಲರಿಗೂ ಮತ ಹಾಕಲು ಮತದಾರರಿಗೆ ಅವಕಾಶ ಇದೆ. ಪ್ರಾಶಸ್ತ್ಯದ ಮತಗಳನ್ನು ಎಲ್ಲರಿಗೂ ಕೊಡಬಹುದು ಎಂದರು.


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ