ಬೆಳಗಾವಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ವತಿಯಿಂದ ಸೇಂಟ್ ಆಂಥೋನಿ ಹಬ್ಬವನ್ನು ಆಚರಣೆ ಮಾಡಲಾಯಿತು.
ಬೆಳಗಾವಿಯ ಕ್ಯಾಂಪ್‌ನ ಸೇಂಟ್ ಆಂಥೋನಿ ಚರ್ಚನಲ್ಲಿ ಸೇಂಟ್ ಆಂಥೋನಿ ಫೀಸ್ಟ್ ನಿಮಿತ್ಯ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಇಂದು ರವಿವಾರ ಸಾಯಂಕಾಲ ಚರ್ಚ್ದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜನೆ ಮಾಡಲಾಗಿತ್ತು. ನಂತರ ಚರ್ಚ್ ಪ್ರಾಂಗಣದಿಂದ ಖಾನಾಪುರ್ ರಸ್ತೆ ಕ್ಯಾಂಪ್ ಮುಖಾಂತರ ಕ್ಯಾಂಪ್‌ನ ಅನೇಕ ರಸ್ತೆಗಳಲ್ಲಿ ಸೇಂಟ್ ಆಂಥೋನಿ ಪ್ರತಿಮೆಯೊಂದಿಗೆ ಸಂಚಾರ ಮಾಡಿದರು. ಈ ವೇಳೆ ಅನೇಕ ಕ್ರಿಶ್ಚಿಯನ್ ಸಮಾಜ ಬಾಂಧವರು ಆಚರಣೆಯಲ್ಲಿ ಭಾಗಿಯಾಗಿದ್ದರು.