ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಸೋಲಿನ ಹತಾಶೆಯಲ್ಲಿ ಹಣ ಹಂಚುವ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅರುಣ ಶಾಹಪುರ ಗಂಭೀರ ಆರೋಪ ಮಾಡಿದ್ದಾರೆ.
ವಾಯುವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಹಾರಾಷ್ಟ್ರ ಪಾಸಿಂಗ್ ಇರುವ ಕಾರಿನಲ್ಲಿ ಹತ್ತು ಸಾವಿರದಂತೆ ಪ್ಯಾಕೇಟ್‍ನಲ್ಲಿ ಹಣವಿಟ್ಟು ಹಂಚಲಾಗುತ್ತಿತ್ತು. ಇದೊಂದೆ ವಾಹನ ಅಲ್ಲದೆ ಇನ್ನೂ ಹದಿನಾಲ್ಕು ಕಾರುಗಳು ಹೀಗೆ ಓಡಾಡುತ್ತಿವೆ.
ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುವ ಕೆಲಸ ಮಾಡ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಇದೆಲ್ಲವನ್ನೂ ತಪಾಸಣೆ ಮಾಡಿ, ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು.
ಯಾವುದೇ ವಾಹನದಲ್ಲಿ ಹಣ ಹಂಚಲು ಬಂದ್ರೆ ಅದರ ವಿಡಿಯೋ ಮಾಡಿ ಕಳುಹಿಸಿ. ಯಾರಾದ್ರೂ ಹಣದ ಆಮಿಶ ಒಡ್ಡಿದ್ರೆ ಅಂತಹವರ ವಿರುದ್ಧ ದೂರು ಕೊಡಿ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಂದಾಜು ಹದಿನೇಳು ಲಕ್ಷಕ್ಕೂ ಅಧಿಕ ಹಣ ಆ ಕಾರಿನಲ್ಲಿದೆ ಎಂದು ಅರುಣ ಶಹಾಪುರ ಆರೋಪ ಮಾಡಿದರು