ಬಳ್ಳಾರಿ : ಒಂದೇ ಕಾಲೇಜು, ಒಂದೇ ತರಗತಿ, ನಿತ್ಯ ಜೊತೆಗೆ ಓಡಾಟ ಹೀಗಾಗಿ ಈ ಇಬ್ಬರ ಮಧ್ಯೆ ಗೊತ್ತಿಲ್ಲದಯೇ ಪ್ರೀತಿ ಶುರುವಾ ಗಿತ್ತು. ಮೂರು ವರ್ಷಗಳ ಕಾಲ ಪರಸ್ಥರ ಪ್ರೀತಿಸಿದ ಆ ಜೋಡಿ ಪೋಷಕರ ವಿರೋಧದ ಮಧ್ಯೆ ಮನೆ ಬಿಟ್ಟು ಬಂದು ಸಪ್ತಪದಿ ತುಳಿದಿದ್ದಾರೆ.
ಆದ್ರೇ ಯುವತಿಯ ಪೋಷಕರ ಭಯದಿಂದ ಇದೀಗ ಆ ಜೋಡಿ ರಕ್ಷಣೆಗಾಗಿ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೇಟ್ಟಿಲೇರಿದ್ದಾರೆ. ಪ್ರತಿ ಸ್ಟೋರಿಯಲ್ಲಿದ್ದಂತೆ ಇಲ್ಲಿಯೂ ಕೂಡ ಯುವತಿಯ ಪೋಷಕರೇ ವಿಲನ್‌ಗಳಾಗಿದ್ದು, ಇದಕ್ಕೆ ಜಾತಿ ಹಣವೇ ಪ್ರಮುಖ ಕಾರಣವಾಗಿದೆ ಎನ್ನಲಾಗ್ತಿದೆ.
ಜೀವಭಯ ಹಿನ್ನಲೆ ಪೊಲೀಸರ ಮೊರೆ
ಪ್ರೀತಿಸಿ ಮದುವೆಯಾಗಿ ಜೋಡಿಗಳಿಗೀಗ ಜೀವಭಯದಿಂದ ಕಣ್ಣೀರಿಡುತ್ತಿದ್ದಾರೆ. ಅಪ್ಪ ನನ್ನ ಕ್ಷಮಿಸಿ ಬಿಡಿ ಅಂತಿರೋ ಮುದ್ದಿನ ಮಗಳು ಮದುವೆ ನಂತರ ರಕ್ಷಣೆಗಾಗಿ ಪೊಲೀಸ್ ಠಾಣೆ ನ್ಯಾಯಾಲಯದ ಮೇಟ್ಟಿಲೇರಿದ ನವಜೋಡಿ. ಹೌದು, ಹೀಗೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಳ್ಳುತ್ತಿರುವ ಈ ಪ್ರೇಮಿಗಳಿಬ್ಬರ ಹೆಸರು ರೂಪಾ(ಹೆಸರು ಬದಲಾಯಿಸಲಾಗಿದೆ) ಮತ್ತು ಶರತಕುಮಾರ್. ಬಳ್ಳಾರಿಯ ಕುಂಬಾರ ಓಣಿಯ ನಿವಾಸಿಯಾಗಿರೋ ಶರತ್ ಹಾಗೂ ರೂಪಾ ಇಬ್ಬರು ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ಎಂಬಿಎ ಓದ್ತಿದ್ರು.
ಎಂಬಿಎ ಮೊದಲ ಸೆಮ್‌ನಲ್ಲೇ ಲವ್ ಆಟ್ ಪಸ್ಟ್ ಸೈಟ್ ಎನ್ನುವಂತೆ ಪರಸ್ಥರ ಒಬ್ಬನೊಬ್ಬರು ಒಪ್ಪಿ ಪ್ರೀತಿಸುತ್ತಿದ್ದರು. ಮೂರು ವರ್ಷಗಳ ಕಾಲ ಪರಸ್ಥರ ಪ್ರೀತಿಸಿದ ಈ ಜೋಡಿ ಈಗ ಸಪ್ತಪದಿ ತುಳಿದಿದ್ದಾರೆ. ಜೂನ್ 3ರಂದು ಮಂತ್ರಾಲಯದಲ್ಲಿ ಪೋಷಕರ ವಿರೋಧವನ್ನು ಲೆಕ್ಕಿಸದೇ ಮದುವೆಯಾದ ಈ ಜೋಡಿಗೀಗ ಜೀವಭಯ ಶುರುವಾಗಿದೆ. ಯುವತಿಯ ಕಡೆಯಿಂದ ಪ್ರೇಮಿಗಳಿಬ್ಬರಿಗೂ ಬೆದರಿಕೆ ಕರೆಗಳು ಬರುತ್ತಿರುವ ಪರಿಣಾಮ ನವದಂಪತಿಗಳು ರಕ್ಷಣೆಗಾಗಿ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೇಟ್ಟಿಲೇರಿದ್ದೇವೆಂದು ಯುವಕ ಶರತಕುಮಾರ್ ಹೇಳಿದ್ದಾರೆ.
ಮಗಳ ವಿರುದ್ಧವೇ ದೂರು ನೀಡಿದ ಪೋಷಕರು
ವಿರೋಧದ ಮಧ್ಯೆ ಮದುವೆಯಾಗಿರೋ ಮಗಳು ರೂಪಾ ವಿರುದ್ಧವೇ ತಂದೆ ವೆಂಕಟೇಶ್ ಹೊಸಪೇಟೆಯ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿತ್ಯ ಪೋನ್ನಲ್ಲಿ ಮಾತನಾಡುತ್ತಿದ್ರು. ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿರುವ ತಂದೆಗೆ ಸ್ವತ: ಪುತ್ರಿಯೇ ಪೋನ್ ಮಾಡಿ ಮದುವೆಯಾಗಿರುವ ವಿಚಾರ ತಿಳಿಸಿದ್ದಾಳೆ. ಆದ್ರೇ ಇಬ್ಬರ ಜಾತಿ ಬೇರೆ ಬೇರೆಯಾಗಿರುವ ಕಾರಣ ಲವ್ ಮ್ಯಾರೇಜ್ ಗೆ ಒಪ್ಪದ ಯುವತಿಯ ಪೋಷಕರು ರೂಪಾಳಿಗೆ ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ ಅಪ್ಪ ನಾನು ತಪ್ಪು ಮಾಡಿದ್ದೇನೆ ನಿಜಾ. ಆದ್ರೆ ಅವನನ್ನ ಬಿಟ್ಟು ಬದುಕಲು ಆಗಲ್ಲ. ನಮ್ಮಿಬ್ಬರನ್ನ ಒಂದಾಗಿ ಬಾಳಲು ಬಿಡಿ ಅಂತಾ ಕಣ್ಣೀರಿಡುತ್ತಲೆ ತಂದೆಗೆ ಮನವಿ ಮಾಡುತ್ತಿದ್ದಾಳೆ.