ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಬಣನೂ ಇಲ್ಲ, ಬಾಣನೂ ಇಲ್ಲ ಎಂದು ಮಾಜಿ ಡಿಸಿಎಂ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಲಕ್ಷ್ಮಣ ಸವದಿ ಪ್ರಯತ್ನಿಸಿದರು. ಅದು ಬಹುತೇಕ ನಿಮ್ಮಂತ ಸ್ನೇಹಿತರು ಹುಟ್ಟು ಹಾಕಿದ ಗುಟುಕು ಅಂತಾ ನಾ ತಿಳಿದುಕೊಂಡಿದ್ದೇನೆ ಎಂದರು. ಪ್ರಭಾಕರ್ ಕೋರೆ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನದ ಬಗ್ಗೆ ಪ್ರಭಾಕರ್ ಕೋರೆ ನಮ್ಮ ನಾಯಕರು ಅದನ್ನೆಲ್ಲಾ ನೀವೆ ಹುಟ್ಟುಹಾಕಿದ್ದು. ಇದನ್ನ ಸೃಷ್ಟಿ ಮಾಡಿ ಕಾಂಗ್ರೆಸ್‍ನವರಿಗೆ ಸ್ವಲ್ಪ ಪೆÇ್ರವೋಕ್ ಮಾಡುವ ಕೆಲಸ ಮಾಡ್ತಿದೀರಿ ಎಂದರು.
ಸವದಿ, ಕತ್ತಿ, ಜಾರಕಿಹೊಳಿ ಸಾಹುಕಾರ್ ಮಧ್ಯೆ ಸರಿ ಇಲ್ಲಾ ಎಂಬ ವಿಚಾರಕ್ಕೆ ಬಹುಶಃ ಯಾರೋ ನಿಮಗೆ ದುಡ್ಡು ಕೊಟ್ಟು ಹೇಳಿಸುತ್ತಿದ್ದಾರೋ ಕಂಡು ಹಿಡಿಯಬೇಕಿದೆ. ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಬಣನೂ ಇಲ್ಲ, ಬಾಣನೂ ಇಲ್ಲ ಎಂದು ಸಮರ್ಥಿಸಿಕೊಂಡರು.