ಮುಂಬೈ: ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಗುತ್ತಾ ಅನ್ನೋದುತಿಳಿಯಲಿದೆ. ಇಂದು ನ್ಯಾಯಾಲಯ ವಾದ-ಪ್ರತಿವಾದ ಆಲಿಸಿದ್ದು, ಶುಕ್ರವಾರ ತೀರ್ಪನ್ನ ನ್ಯಾಯಾಲಯ ಕಾಯ್ದಿರಿಸಿದೆ. ಹಾಗಾಗಿ ಇಂದು ಸಹ ರಿಯಾ ಬೈಖಲಾ ಜೈಲೂಟ ಸವಿಯಬೇಕಿದೆ.ಎನ್‍ಸಿಬಿ ಪರ ವಕೀಲರ ವಾದ: ಜಾಮೀನು ನೀಡದಂತೆ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಪರ ವಕೀಲರೂ ಕೊನೆಯವರೆಗೂ ವಾದ ಮಂಡಿಸಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು, ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿರೋದು ಒಳ್ಳೆಯದು. ಕಳೆದ ನಾಲ್ಕೈದು ದಿನಗಳಿಂದ ತನಿಖಾಧಿಕಾರಿಗಳು ಮನೆಗೂ ಸಹ ಹೋಗಿಲ್ಲ. ಅಧಿಕಾರಿಗಳು ಬಿಡುವಿಲ್ಲದೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿ ರಿಯಾ ಚಕ್ರವರ್ತಿ ತಮ್ಮ ಸ್ವಂತ ಉಪಯೋಗಕ್ಕಾಗಿ ಡ್ರಗ್ಸ್ ಖರೀದಿಸಿಲ್ಲ. ಬದಲಾಗಿ ಬೇರೆಯವರಿಗಾಗಿ ಡ್ರಗ್ಸ್ ಖರೀದಿ ಮಾಡಲಾಗಿದೆ. ಈ ಹಿನ್ನೆಲೆ ಎನ್‍ಡಿಪಿಎಸ್ ಆ್ಯಕ್ಟ್ 27ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೋರ್ವ ಆರೋಪಿ ಶೌವಿಕ್ ಚಕ್ರವರ್ತಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಮಾರ್ಚ್ 16ರಂದು ಸೋದರನಿಗೆ ಮೆಸೇಜ್ ಮಾಡಿದ್ದ ರಿಯಾ ಗೆಳೆಯ ಸುಶಾಂತ್ ಗಾಗಿ ಮಾರಿಜುನಾ ಮತ್ತು ಹ್ಯಾಶ್ ಕೇಳಿದ್ದಳು. ಮೃತ ಸುಶಾಂತ್ ದಿನಕ್ಕೆ ನಾಲ್ಕರಿಂದ ಐದು ಬಾರಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅಕ್ಕನ ಮೆಸೇಜ್ ಗೆ ರಿಪ್ಲೈ ಮಾಡಿದ್ದ ಶೌವಿಕ್, 5 ಗ್ರಾಂ ತೂಕದ ಕ್ಯೂರೆಟೆಡ್ ಮಾರಿಜುವನಾ ನೀಡುವ ವ್ಯವಸ್ಥೆ ಮಾಡುತ್ತೇನೆ. ಒಮ್ಮೆ ಇದನ್ನ ತೆಗೆದುಕೊಂಡ್ರೆ 20 ಬಾರಿಯ ಸ್ಮೋಕ್ ಗೆ ಸಮನಾಗಿರುತ್ತೆ ಅಂತ ಶೌವಿಕ್ ಹೇಳಿದ್ದಾನೆ. ಅಕ್ಕನ ಸಮ್ಮತಿ ಪಡೆದ ಶೌವಿಕ್ ಡ್ರಗ್ಸ್ ಖರೀದಿಗಾಗಿ ಗೆಳೆಯ, ಸಂಬಂಧಿ ಅಬ್ದುಲ್ ಬಸೀತ್ ನನ್ನ ಸಂಪರ್ಕಿಸಿದ್ದಾನೆಕೊನೆಗೆ ರಿಯಾ ಮತ್ತು ಸ್ಯಾಮುಯೆಲ್ ಮಿರಂಡಾ ಇಬ್ಬರು ನೇರವಾಗಿ ಬಸಿತ್ ನನ್ನು ಸಂಪರ್ಕಿಸಿ ಚೌಕಾಸಿ ಮಾಡಿದ್ದಾರೆ. ವ್ಯವಹಾರದ ಬಳಿಕ ಜೈದ್ ಮೂಲಕ ಬಸೀತ್ ಮಾರ್ಚ್ 17ರಂದು ಡ್ರಗ್ಸ್ ತಲುಪಿಸಿದ್ದನು. ಈ ಎಲ್ಲ ಅಂಶಗಳನ್ನು ಶೌವಿಕ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ವಾದ ಮಂಡಿಸಿದ್ದರು