ಧಾರವಾಡ: ರಾಜ್ಯದಲ್ಲಿ ಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಶ್ರೀರಾಮಸೇನೆ ಸಜ್ಜಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಮೈಕ್ ತೆರವು ವಿಳಂಬವಾಗಿರೋದ್ರಿಂದ ಇವತ್ತು ಬಿಜೆಪಿ ಮುಖಂಡರ ಮನೆ ಮುಂದೆ ಪ್ರತಿಭಟನೆ ಆಯೋಜಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿಗೆ ಶ್ರೀರಾಮಸೇನೆ ಕರೆ ಕೊಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಗೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ಕೊಟ್ಟಿವೆ.
ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಧರಣಿಯಲ್ಲಿ ಭಾಗವಹಿಸುವಂತೆ ಶ್ರೀರಾಮಸೇನೆಯ ಸದಸ್ಯರಿಗೆ, ಪದಾಧಿಕಾರಿಗಳಿಗೆ, ಹಿಂದೂಪರ ಸಂಘಟನೆ ಮತ್ತು ಹಿಂದೂಗಳಿಗೆ ಸಂದೇಶ ರವಾನಿಸಲಾಗಿದೆ. ಈ ಬಗ್ಗೆ ಜೂನ್ 2ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುತಾಲಿಕ್ ಮಾಹಿತಿ ಕೊಟ್ಟಿದ್ದರು. ಜೂನ್ 8ರಂದು ಬಿಜೆಪಿ ಎಂಎಲ್‍ಎಗಳ ಕಚೇರಿ ಮುಂದೆ ಧರಣಿ ಕೂರುವ ಬಗ್ಗೆ ಎಚ್ಚರಿಸಿದ್ದರು.
Laxmi News 24×7