ಚಿಕ್ಕೋಡಿ (ಬೆಳಗಾವಿ): ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ರೆ..ಉಳಿದ ಅರ್ಧ ಭಾಗ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು..ಹೀಗಾಗಿ ಆ ಬಾಲಕ ನರಳಾಡುತ್ತಿದ್ದ..ಕೊನೆಗೆ ಲಾರಿ ಚಕ್ರಕ್ಕೆ ಸಿಲುಕಿದ್ದ ಆ ಬಾಲಕನನ್ನು ಅದ್ಯಾಗೋ ರಕ್ಷಿಸಲಾಯಿತು.ಆದ್ರೂ ತೀವ್ರವಾಗಿ ಗಾಯಗೊಂಡಿದ್ದ ಆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.
ಅಂದ ಹಾಗೇ ಇಂತಹ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ನಡೆದಿದೆ.
ಸದ್ಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ಬಾಲಕನೊಬ್ಬ ಅಂಗಡಿಗೆ ಹೋಗಿ ಬರುವಾಗ ಲಾರಿಯೊಂದು ಏಕಾಎಕಿ ನುಗ್ಗಿದೆ. ಪರಿಣಾಮ ಲಾರಿಯ ಚಕ್ರಕ್ಕೆ ಬಾಲಕ ಸಿಲುಕಿದ್ದಾನೆ.ಆದರೆ ಲಾರಿ ಅತೀ ವೇಗದಲ್ಲಿದ್ದ ಪರಿಣಾಮ ಬಾಲಕ ಸಮೇತ ಲಾರಿ ಚಕ್ರ ಅನತಿ ದೂರದಲ್ಲಿದ್ದ ಚರಂಡಿಯೊಳಗೆ ಹೋಗಿ ಸಿಲುಕಿಕೊಂಡಿದೆ. ದುರದೃಷ್ಟವಶಾತ್ ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ರೆ,ಇನ್ನಾರ್ಧ ಭಾಗ ಮಾತ್ರ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು..
ಇನ್ನು ಅಲ್ಲಿದ್ದ ಜನರೆಲ್ಲಾ ಬಾಲಕನ್ನು ಹೊರತೆಗೆಯಲು ಹರಸಾಹಪಟ್ಟರು.ಕೊನೆಗೆ ಜೆಸಿಬಿ ಸಹಾಯದಿಂದ ಬಾಲಕನ್ನು ಲಾರಿಚಕ್ರ-ಚರಂಡಿ ನಡುವಿನ ಸ್ಥಳದಿಂದ ಹೊರ ತರಲಾಯಿತು.
ಇದೇ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ನಿಪ್ಪಾಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು..ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಬಾಲಕ ಇದೀಗ ಸಾವು ಕಂಡಿದ್ದಾರೆ.