ಹುಬ್ಬಳ್ಳಿ: ಕ್ರಿಕೆಟ್ ಟೀಮ್ ಗೆದ್ದಾಗ ಕಪ್ಪು ತೆಗೆದುಕೊಳ್ಳವುದು ಕ್ಯಾಪ್ಟನ್ ಮಾತ್ರ. ಇತರ ಆಟಗಾರ ಶ್ರಮವು ಟೀಮ್ ಗೆಲ್ಲಲು ಕಾರಣವಾಗುತ್ತದೆ ಅದೇ ರೀತಿ ಕುಮಾರಸ್ವಾಮಿ ಕಪ್ ತೆಗೆದುಕೊಂಡಿರಬಹುದೆಂದು ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕ ಬಸವರಾಜ ಹೊರಟ್ಟಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮಾಡಿದ ಯೋಜನೆಗಳನ್ನು ಹೊರಟ್ಟಿ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಕ್ರಿಕೆಟ್ ಟೀಮ್ ಗೆದ್ದಾಗ ಕಪ್ಪು ತೆಗೆದುಕೊಳ್ಳವುದು ಕ್ಯಾಪ್ಟನ್ ಮಾತ್ರ. ಇತರ ಆಟಗಾರ ಶ್ರಮವು ಟೀಮ್ ಗೆಲ್ಲಲು ಕಾರಣವಾಗುತ್ತದೆ ಅದೇ ರೀತಿ ಕುಮಾರಸ್ವಾಮಿ ಕಪ್ ತೆಗೆದುಕೊಂಡಿರಬಹುದೆಂದು ಟಾಂಗ್ ನೀಡಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ನಗರದಲ್ಲಿ ಮಾತನಾಡಿ, ಯೋಜನೆಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಡುವಂತದ್ದು, ನನ್ನ ಒತ್ತಾಸೆಯ ಮೇರೆಗೆ ಹಲವು ಯೋಜನೆಗಳು ಶಿಕ್ಷಕರಿಗಾಗಿ ಜಾರಿಯಾಗಿವೆ. ಶಿಕ್ಷಕರ ಸಮಸ್ಯೆಗಳಿಗಾಗಿ ನಾನು ಹಗಲಿರುಳು ದುಡಿದ್ದೇನೆಂದರು.