Breaking News

ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ವಿವಾದ ಎಬ್ಬಿಸಬೇಡಿ’-ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್

Spread the love

ನವದೆಹಲಿ: ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ’ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.

 

ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸುವುದು ಒಂದು ಅಪವಾದ ಎಂದು ಆರ್‌ಎಸ್‌ಎಸ್ ಈಗಾಗಲೇ ಇನ್ನು ಮುಂದೆ ಅಂತಹ ಚಳುವಳಿಗಳನ್ನು ಹಮ್ಮಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

‘ಈಗ ಜ್ಞಾನವಾಪಿ ಮಸೀದಿಯ ವಿಷಯ ನಡೆಯುತ್ತಿದೆ. ಇತಿಹಾಸವನ್ನು ಯಾವತ್ತು ಬದಲಾಯಿಸಲು ಸಾಧ್ಯವಿಲ್ಲ, ಆ ಇತಿಹಾಸವನ್ನು ನಾವು ಮಾಡಿಲ್ಲ, ಅದನ್ನು ಇಂದಿನ ಹಿಂದುಗಳಾಗಲಿ ಅಥವಾ ಮುಸ್ಲಿಮರು ಕೂಡ ಮಾಡಿಲ್ಲ. ಇದು ಇಸ್ಲಾಂ ಧರ್ಮವು ಭಾರತಕ್ಕೆ ಬಂದಂತಹ ಸಂದರ್ಭದಲ್ಲಿ ನಡೆದದ್ದು.ಆಗ ಆಕ್ರಮಣಕಾರರು, ದಾಳಿಯ ಸಮಯದಲ್ಲಿ, ಸ್ವಾತಂತ್ರ್ಯವನ್ನು ಬಯಸುವ ಜನರ ಸ್ಥೈರ್ಯವನ್ನು ದುರ್ಬಲಗೊಳಿಸಲು ದೇವಾಲಯಗಳನ್ನು ನಾಶಪಡಿಸಿದರು, ಅಂತಹ ಸಾವಿರಾರು ದೇವಾಲಯಗಳಿವೆ, “ಎಂದು ಅವರು ಹೇಳಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ