ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಕಿಭಾವಿ ಗ್ರಾಮದ ಜೈನ ಮಂದಿರವೊಂದರಲ್ಲಿ ಶಿವಲಿಂಗ ಮೂರ್ತಿ ಇರುವುದು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ್ದ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಗ್ರಾಮಸ್ಥರು ಮಾಹಿತಿ ನೀಡಿದ್ದು, ಮುರಕಿಭಾವಿ ಗ್ರಾಮದಲ್ಲಿ ಜೈನ ಸಮುದಾಯದ ಯಾವುದೇ ಕುಟುಂಬಗಳಿಲ್ಲ. ಹಲವು ವರ್ಷಗಳಿಂದ ಜೈನ ಮಂದಿರ ಪಾಳು ಬಿದ್ದಿದೆ. ಹೀಗಾಗಿ ಊರಿನ ಜನರೆಲ್ಲರೂ ಸೇರಿಕೊಂಡು ಶಿವಲಿಂಗ ಮತ್ತು ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿ ಪೂಜೆ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಿವಲಿಂಗ, ಬಸವಣ್ಣ ಜೊತೆ ಗರ್ಭಗುಡಿಯಲ್ಲಿರುವ ಮಹಾವೀರ ತೀರ್ಥಂಕರ ಮೂರ್ತಿಗೂ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಮುರಕಿಭಾವಿ ಗ್ರಾಮಸ್ಥರು ತಿಳಿಸಿದ್ದಾರೆ.
Laxmi News 24×7