ಕೊಪ್ಪಳ: ರಜೆ ಬೇಕೆಂದರೆ ಲಾಡ್ಜ್ಗೆ ಬಂದು ಬಟ್ಟೆ ಬಿಚ್ಚಬೇಕಂತೆ ಮಹಿಳಾ ನೌಕರರು! ಕೊಪ್ಪಳ ಎಸ್ಸಿ ಕಚೇರಿಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ಮಹಿಳಾ ನೌಕರರಿಗೆ ಸಹಾಯಕ ಆಡಳಿತಾಧಿಕಾರಿ ಮಲ್ಲಿನಾಥ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂಬ ಗಂಭೀರ ಆರೋಪ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
ಸರ್ಕಾರಿ ಕಚೇರಿಯಲ್ಲೇ ಆಡಳಿತಾಧಿಕಾರಿ ಕಾಮದಾಟ ಆಡುತ್ತಿದ್ದು, ಈ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಸಹಿತ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನ್ಯಾಯ ಸಿಗುತ್ತಿಲ್ಲ ಎಂದು ನೊಂದ, ಹೆಸರು ಹೇಳಲಿಚ್ಛಿಸದ ಮಹಿಳಾ ನೌಕರರು ಮಾಧ್ಯಮಗಳ ಬಳಿ ಅಳಲು ತೋಡಿಕೊಂಡಿದ್ದಾರೆ.
ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ಸೇರಿರುವ ವಿಧವೆಯರನ್ನೂ ಕಲ್ಲಿನಾಥ ಲೈಂಗಿಕವಾಗಿ ಬಳಸಿಕೊಂಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆಯಂತೆ. ದಿನ ಬೆಳಗಾದ್ರೆ ಸರ್ಕಾರಿ ಕಚೇರಿಯಲ್ಲೇ ಕಿಸ್ಸಿಂಗ್ ಕಿಸ್ಸಿಂಗ್… ಮಹಿಳಾ ಸಿಬ್ಬಂದಿ ರಜೆ ಕೇಳಿದ್ರೆ., ‘ನಿನಗೆ ಗಂಡ ಇಲ್ಲ, ರಜೆ ಏಕೆ ಬೇಕು? ನಾನು ಮನೆಗೆ ಬರಲೇ’ ಅಂತಾನಂತೆ! ಬೆಳಗ್ಗೆ ಸ್ವಚ್ಛತಾ ಕಾರ್ಯಕ್ಕೆಂದು ಬರುವ ಮಹಿಳಾ ಸಿಬ್ಬಂದಿಗೆ, ‘ನಿನ್ನ ಬಾಡಿ ಶೇಪಿಂಗ್ ಚೆನ್ನಾಗಿದೆ, ಏನು ತಿನ್ತೀಯಾ?’ ಎಂದು ಚುಡಾಯಿಸಿದ್ದಾನಂತೆ. ‘ರಜೆ ಬೇಕಿದ್ರೆ ಕೇಳು ಕೊಡ್ತೀನಿ, ಆದರೆ ಒಂದು ರಾತ್ರಿ ನನ್ನೊಂದಿಗೆ ಲಾಡ್ಜ್ಗೆ ಬರಬೇಕು ನಿನ್ಗೆ ಹಣದ ಜತೆಗೆ ಸುಖವನ್ನೂ ಕೊಡ್ತೀನಿ’ ಎಂದು ಆಫರ್ ಮಾಡ್ತಾನಂತೆ. ಮಲ್ಲಿನಾಥ ಹೇಳಿದಂತೆ ಕೇಳದಿದ್ದರೆ ನೌಕರರ ಸಾಂವಿಧಾನಿಕ ಹಕ್ಕಿಗೂ ಕುತ್ತು ಬರುತ್ತಂತೆ. ರಜೆ ಪಡೆಯುಲು ಮಹಿಳಾ ಸಿಬ್ಬಂದಿ ಆತನ ಮುಂದೆ ಬಟ್ಟೆ ಬಿಚ್ಚಬೇಕಂತೆ. ಮಲ್ಲಿನಾಥನ ಕಾಟಕ್ಕೆ ಬೇಸತ್ತು 2019ರಲ್ಲೇ ಇಬ್ಬರು ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಈ ಸಂಬಂಧ ಮಲ್ಲಿನಾಥಗೆ ಶೋಕಾಸ್ ನೋಟಿಸ್ ನೀಡಿ ಹಿಂದಿನ ಎಸ್ಪಿ ಕೈ ತೊಳೆದುಕೊಂಡಿದ್ದಾರೆ. ಈ ಎಸ್ಪಿ ವರ್ಗಾವಣೆ ಆದ ನಂತರ ಮಲ್ಲಿನಾಥ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ ಎಂದು ನೊಂದ ಮಹಿಳೆಯರು ಕಣ್ಣೀರಿಟ್ಟಿದ್ದಾರೆ.
ಅಷ್ಟೇ ಅಲ್ಲ, ಮಹಿಳಾ ಸಿಬ್ಬಂದಿ ಆರೋಪಿಸಿದಂತೆ ಯಾವುದೇ ಘಟನೆ ನಡೆದಿಲ್ಲ ಎಂದು ಹಿಂದಿನ ಡಿವೈಎಸ್ಪಿ ವರದಿ ನೀಡಿದ್ದಾರೆ. ಈಗಿನ ಎಸ್ಪಿ ಅವರಿಗೆ ಮಾಹಿತಿ ಇದ್ದರೂ ಪ್ರಯೋಜನವಾಗಿಲ್ಲ.
ಅಧಿಕಾರಿಗಳಿಂದ ನ್ಯಾಯ ಸಿಗುವ ಆಸೆ ಕೈಬಿಟ್ಟ ನೊಂದ ಮಹಿಳೆಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 2019ರಲ್ಲಿ ಬಂದ ದೂರನ್ನ ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಡಿವೈಎಸ್ಪಿ ಅವರು ತನಿಖೆ ನಡೆಸಿದಾಗ ದೂರುದಾರರ ಜಾಗದಲ್ಲಿದ್ದ ಹೆಸರಿನ ಮಹಿಳಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು, ಇದೆಲ್ಲವೂ ಯಾರೋ ಬೇಕಂತ ಮಾಡಿದ್ದಾರೆ. ನಾವು ದೂರನ್ನು ಕೊಟ್ಟಿಯೇ ಇಲ್ಲ ಎಂದಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಆದರೆ ಅಧಿಕಾರಿಯನ್ನ ರಕ್ಷಿಸಲು ಒತ್ತಡ ಹಾಕಿ ಸುಳ್ಳು ಹೇಳಿಸಿರುವ ಮಾಹಿತಿ ಎಂಬ ಗುಸುಗುಸು ಕೂಡ ಎಸ್ಪಿ ಕಚೇರಿಯಲ್ಲಿ ಕೇಳಿಬರ್ತಿದೆ. ಈ ಆರೋಪವನ್ನು ಮಲ್ಲಿನಾಥ ಹಲ್ಲಗೆಳೆದಿದ್ದಾರೆ. ಆದರೆ ಸರ್ಕಾರಿ ಕಚೇರಿಯಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದು ಎಷ್ಟು ಸರಿ? ಇದು ಒಪ್ಪಿತವಾದರೂ ಸರ್ಕಾರಿ ಕಚೇರಿಯನ್ನು ವೈಯಕ್ತಿಯ ಕೆಲಸಕ್ಕೆ ಬಳಸಿಕೊಂಡದ್ದು ದುರ್ನಡತೆ ಅಲ್ಲವೇ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸತ್ಯಾಸತ್ಯಾತೆ ತಿಳಿಯಲು, ಅಧಿಕಾರಿ ಮೇಲಿನ ಆರೋಪ ನಿಜವೇ ಅಥವಾ ಸುಳ್ಳೇ ಎಂದು ಮತ್ತೊಮ್ಮೆ ತನಿಖೆ ನಡೆಸಬೇಕು ಎಂಬ ಮಾತೂ ಕೇಳಿ ಬರುತ್ತಿದೆ.