ಬೆಳಗಾವಿಯಲ್ಲಿ ಮಂದಿರ ವರ್ಸೆಸ್ ಮಸೀದಿ ವಿವಾದ ತಾರಕಕ್ಕೇರಿದ್ದು, ಬಿಜೆಪಿ ಸರ್ಕಾರ ಬೆಲೆಏರಿಕೆ ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಇದನ್ನು ಮುಚ್ಚಿಡಲು ಮಂದಿರ ಮಸೀದಿ ವಿವಾದಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ, ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ಬ್ರಾಹ್ಮಣರು ಮುಸ್ಲಿಮರು ಸೇರಿ ಕಟ್ಟಿದ್ದಾರೆ. ಬಿಜೆಪಿ ಸರ್ಕಾರ ದೇಶ ಹಾಗೂ ರಾಜ್ಯದಲ್ಲಿ ಬೆಲೆಏರಿಕೆ ನಿಯಂತ್ರಿಸಲು ವಿಫಲವಾಗಿದೆ. ತೈಲ ಏರಿಕೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿದೆ. ಇದನ್ನ ಮುಚ್ಚಿಡಲು ಮಂದಿರ ಮಸೀದಿ ವಿವಾದ ಮುಂದಿಡುತ್ತಿದ್ದಾರೆ. ಇದು ಎಲ್ಲರಿಗೋ ಗೊತ್ತಿರುವ ವಿಚಾರ. ಹಾಗಾಗಿ ಹಿಂದೂ ಹಾಗೂ ಮುಸಲ್ಮಾನ್ ಬಾಂಧವರು ಯಾರೂ ಕೂಡ ಇದರಲ್ಲಿ ಭಾಗಿಯಾಗಬಾರದೆಂದು ಮನವಿ ಮಾಡಿದರು.
Laxmi News 24×7