ಶಿರಸಿ (ಉತ್ತರ ಕನ್ನಡ): ಕನ್ನಡದ ಖ್ಯಾತ ನಟಿಯೊಬ್ಬಳು ನನಗೆ ಮಂಚಕ್ಕೆ ಕರೆದಿದ್ಲು. ಅವಕಾಶಕ್ಕಾಗಿ ಮಂಚ ಏರೋದು ಕನ್ನಡದಲ್ಲಿ ಕಾಮನ್. ನಾನು ಕನ್ನಡದ ಸಹವಾಸ ಬೇಡ ಅಂತ ಓಡಿ ಬಂದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು ತೆಲುಗು ನಿರ್ದೇಶಕ ಗೀತಕೃಷ್ಣ.
ಇದು ಭಾರಿ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಯೂಟರ್ನ್ ಹೊಡೆದಿದ್ದ ಅವರು, ನಾನು ಕನ್ನಡಿಗರ ಬಗ್ಗೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿಲ್ಲ. ನಾನು ಒಬ್ಬ ನಿರ್ಮಾಪಕ ಕಮ್ ನಿರ್ದೇಶಕನಾಗಿದ್ದೇನೆ. ನನಗೆ ಯಾರು ತಾನೇ ಕಾಸ್ಟಿಂಗ್ ಕೌಚ್ ಮಾಡಲು ಸಾಧ್ಯ. ನಾನು ಎಲ್ಲಾ ಚಿತ್ರರಂಗದಲ್ಲಿರುವ ಕೊಳಕು ಮನಸ್ಥಿತಿಯ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದಿದ್ದರು.
ಆದರೆ ಈ ಅಸಹ್ಯ ಹೇಳಿಕೆಯ ವಿರುದ್ಧ ನಟ ಶಿವರಾಜ್ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ಯಾರೋ ಏನೋ ಹೇಳಿದರೂ ಅಂತಾ ಕೇಳೋದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಪ್ರೂವ್ ಆಗಿದೆ. ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಫ್-2ನಿಂದ ಅದು ಸಾಬೀತಾಗಿದೆ ಎಂದಿದ್ದಾರೆ.
ಯಾರೇ ಏನೇ ಹೇಳಿದರೂ ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನು ತೋರಿಸುತ್ತೆ. ಇಂಥವರ ಬಗ್ಗೆ ರಿಯಾಕ್ಟ್ ಮಾಡಿದಷ್ಟು ಅವರಿಗೇ ಅನುಕೂಲ ಹೆಚ್ಚುತ್ತದೆ. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲಾ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳಿಸಿದ್ದಾರೆ. ಇಂಥವರ ಕೀಳು ಮಾತಿಗೆ ಕಿವಿ ಕೊಡಬೇಡಿ. ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು ಎಂದರು ಶಿವಣ್ಣ.
Laxmi News 24×7