Breaking News

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಕ್ಲರ್ಕ್‌ನನ್ನು ಬಂಧಿಸಿದ್ದಾರೆ.

Spread the love

ರಾಮನಗರ: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಕ್ಲರ್ಕ್‌ನನ್ನು ಬಂಧಿಸಿದ್ದಾರೆ.

ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಕ್ಲರ್ಕ್‌ ರಂಗೇಗೌಡ ಬಂಧಿತ ಆರೋಪಿ. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆಯು ವಾಟ್ಸಪ್‌ ಮೂಲಕ ಸೋರಿಕೆ ಆಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿತ್ತು. ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೆಡ್ ಮಾಸ್ಟರ್ ಹಾಗೂ ಶಿಕ್ಷಕರಿರುವ ಗ್ರೂಪ್‌ನಲ್ಲೇ ಶೇರ್ ಮಾಡಲಾಗಿತ್ತು.

ಇದಲ್ಲದೇ ಕೆಂಪೇಗೌಡ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗಳಿಸಿದ್ದು, ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ರಂಗೇಗೌಡ ವಾಟ್ಸಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು, ಅಲ್ಲಿನ ಒಬ್ಬ ಟೀಚರ್ ಹಾಗೂ ಸ್ಥಳೀಯ ವರದಿಗಾರರೊಬ್ಬರಿಗೆ ತಿಳಿದಿತ್ತು ಎಂಬ ಮಾಹಿತಿ ದೊರೆತಿದೆ. 


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ