ಬೆಳಗಾವಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆ ಉತ್ತಮ ಫಲಿತಾಂಶ ಗಳಿಸಿದೆ.
11 ವಿದ್ಯಾರ್ಥಿನಿಯರಲ್ಲಿ 8 ಮಂದಿ ‘ಎ’ ಗ್ರೇಡ್, ಇಬ್ಬರು ‘ಬಿ’ ಗ್ರೇಡ್ ಮತ್ತು ಒಬ್ಬರು ‘ಸಿ’ ಗ್ರೇಡ್ ಪಡೆದು ಉತ್ತೀರ್ಣರಾಗಿದ್ದಾರೆ.
ಪ್ರತಿಭಾ ಹಣಮಂತ ಹೊನ್ನಾಪುರ ಶೇ 87ರಷ್ಟು, ಪವಿತ್ರಾ ಪರಪ್ಪ ಕಾಪ್ಸೆ ಶೇ 86ರಷ್ಟು ಹಾಗೂ ರುದ್ರಾಕ್ಷಿ ಸಂಗೊಳ್ಳಿ ಶೇ 85ರಷ್ಟು ಅಂಕಗಳನ್ನು ಪಡೆದು ಕ್ರಮವಾಗಿ ಮೊದಲ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.
ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ಎ.ಎಂ., ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ, ಶಾಲೆಯ ಪ್ರಭಾರಿ ಸೂಪರಿಂಟೆಂಡೆಂಟ್ ಡಿ.ಎನ್. ನಂದೇಶ್ವರ ಅಭಿನಂದಿಸಿದ್ದಾರೆ.
Laxmi News 24×7