Breaking News

PSI ಹುದ್ದೆ ಅಕ್ರಮ: ಮೊದಲ ರಾತ್ರಿಯ ಮೂಡ್​ನಲ್ಲಿದ್ದವನಿಗೆ ಸಿಐಡಿ ಶಾಕ್

Spread the love

ಬಾಗಲಕೋಟೆ: ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ಉರುಳು ನವ ವಿವಾಹಿತನಿಗೂ ಸುತ್ತಿಕೊಂಡಿದ್ದು, ಮೊದಲ ರಾತ್ರಿಯ ಮೂಡ್​ನಲ್ಲಿದ್ದವನಿಗೆ ಸಿಐಡಿ ಶಾಕ್​ ಕೊಟ್ಟಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶ್ರೀಕಾಂತ್ ಚೌರಿ ಬಂಧಿತ.

ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್​ನ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಇದಾದ 5 ದಿನಕ್ಕೆ ಸಿಐಡಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.

ಧಾರವಾಡದಲ್ಲಿರುವ ಇನ್ಸ್ಪೈರ್ ಇಂಡಿಯಾ ಐಎಎಸ್ ಆಯಂಡ್ ಕೆಎಎಸ್ ಕೋಚಿಂಗ್​ ಸೆಂಟರ್​ನ ಮಾಜಿ ನಿರ್ದೇಶಕನಾಗಿದ್ದ ಶ್ರೀಕಾಂತ, ಪಿಎಸ್​ಐ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ಹುದ್ದೆ ಡೀಲ್ ಮಾಡಿಕೊಟ್ಟಿದ್ದಾನೆ ಎಂಬ ಶಂಕೆ ದಟ್ಟವಾಗಿದೆ. 6 ದಿನದ ಹಿಂದೆಯೇ ಬೆಂಗಳೂರಿಂದ ಜಮಖಂಡಿಗೆ ಬಂದಿದ್ದ ಸಿಐಡಿ ತಂಡ, ಶ್ರೀಕಾಂತನ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದೆ.

ಮದುವೆ ಸಂಭ್ರಮದಲ್ಲಿದ್ದ ಶ್ರೀಕಾಂತ, ರಬಕವಿಬನಹಟ್ಟಿ ತಾಲೂಕಿನ ಯರಗಟ್ಟಿಯ ಯಲ್ಲಮ್ಮ ದೇವಸ್ಥಾನಕ್ಕೆ ಬುಧವಾರ ತೆರಳಿದ್ದ ವೇಳೆ ಸಿಐಡಿ ಅಧಿಕಾರಿಗಳು ದೇವಸ್ಥಾನದಲ್ಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈತನ ಬಳಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅಂತಿರುವ ವಿಜಿಟಿಂಗ್ ಕಾರ್ಡ್ ಪತ್ತೆಯಾಗಿದೆ.

ಪ್ರಭಾವಿ ರಾಜಕೀಯ ವ್ಯಕ್ತಿಗಳ ಜೊತೆ ಶ್ರೀಕಾಂತ್ ಚೌರಿ ಸಂಪರ್ಕ ಹೊಂದಿದ್ದ. ಸಚಿವ ಎಂಟಿಬಿ ನಾಗರಾಜ್​, ಬಾಗಲಕೋಟೆ ಎಂಎಲ್​ಸಿ ಹನುಮಂತ ನಿರಾಣಿ, ಮಾಜಿ ಸಚಿವೆ ಉಮಾಶ್ರಿ, ಶಾಸಕ ಸಿದ್ದು ಸವದಿ ಸೇರಿ ಪ್ರಮುಖ ನಾಯಕರ ಜೊತೆ ಒಡನಾಟ ಇಟ್ಟುಕೊಂಡಿದ್ದ ಎನ್ನಲಾಗಿದೆ.


Spread the love

About Laxminews 24x7

Check Also

ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸ

Spread the love ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ