Breaking News

ಹತ್ತಾರು ಜನರ ಎದುರೇ ವಕೀಲೆ ಮೇಲೆ ಹಲ್ಲೆ; ಆರೋಪಿಯ ಬಂಧನ..

Spread the love

ಬಾಗಲಕೋಟೆ: ರಸ್ತೆ ಬದಿಯಲ್ಲಿ ಹತ್ತಾರು ಜನರ ಎದುರೇ ವಕೀಲೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂಗೀತಾ ಸಿಕ್ಕೇರಿ ಎಂಬಾಕೆ ಹಲ್ಲೆಗೊಳಗಾದ ವಕೀಲೆ.

ಮಹಾಂತೇಶ್ ಚೊಳಚಗುಡ್ಡ ಎಂಬಾತ ಬಂಧನಕ್ಕೆ ಒಳಗಾಗಿರುವ ಆರೋಪಿ. ಬಾಗಲಕೋಟೆಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿತ್ತು. ಸಂಜೆಯೊಳಗಾಗಿ ಬಾಗಲಕೋಟೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ರಸ್ತೆ ಬದಿಯಲ್ಲಿ ಸಾರ್ವಜನಿಕರ ಎದುರೇ ಸಂಗೀತಾ ಮೇಲೆ ಮಹಾಂತೇಶ್ ಹಲ್ಲೆ ನಡೆಸಿದ್ದು, ಒದೆ ಕೂಡ ಕೊಟ್ಟಿದ್ದಾನೆ. ಈ ಸಂದರ್ಭದಲ್ಲಿ ಆಕೆಯ ಜತೆಗಿದ್ದ ಪತಿಗೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಇಬ್ಬರನ್ನೂ ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ಬಾಗಲಕೋಟೆಯಲ್ಲಿ ಖಾಕಿ ಇಲಾಖೆಗೆ ಸರ್ಜರಿ: ಬನಹಟ್ಟಿ ಸಿಪಿಐ ಹೆಚ್.ಆರ್. ಪಾಟೀಲ್ ಅಮಾನತ್ತು

Spread the loveಬಾಗಲಕೋಟೆ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದೆ. ಕರ್ತವ್ಯ ಲೋಪದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬನಹಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ