Breaking News

889 ನೇ ಬಸವ ಜಯಂತಿಯ ನಿಮಿತ್ಯ ಆಂಜನೇಯ ನಗರದಲ್ಲಿ 10 ನೆ ದಿನದ ಲಿಂಗಾಯತ ಧರ್ಮ ಜಾಗೃತಿ ಪಾದಯಾತ್ರೆ

Spread the love

889 ನೇ ಬಸವ ಜಯಂತಿಯ ನಿಮಿತ್ಯ ಆಂಜನೇಯ ನಗರದಲ್ಲಿ 10 ನೆ ದಿನದ ಲಿಂಗಾಯತ ಧರ್ಮ ಜಾಗೃತಿ ಪಾದಯಾತ್ರೆಯ ನಾಗನೂರು ರುದ್ರಾಕ್ಷಿಮಠದ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಆಂಜನೇಯ ನಗರದ ಎಲ್ಲ ಬಡಾವಣೆಗಳಲ್ಲಿ ಜರುಗಿತು.

ಪಾದಯಾತ್ರೆಯಲ್ಲಿ ಶಿವಾನಂದ ಮಹಾಸ್ವಾಮಿಗಳು ಹಂಡಿಗುಂದ , ಡಾ. ಬಸವಾನಂದ ಸ್ವಾಮೀಜಿ, ಪೂಜ್ಯ ಓಂ ಗುರೂಜಿ, ಕಾರಂಜಿಮಠದ ಪೂಜ್ಯ ಶಿವಾಯೋಗಿ ದೇವರು ಮತ್ತು ಇತರ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ 10 ನೆ ದಿನದ ಪಾದಯಾತ್ರೆಯ ಆಂಜನೇಯ ನಗರದ ಡೈರಿಯಿಂದ ಪ್ರಾರಂಭವಾಗಿ ಗಣಪತಿ ಗುಡಿ ಹತ್ತಿರದ ಅನುಭವ ಮಂಟಪದಲ್ಲಿ ಮಹಾಪ್ರಸಾದ ಕೈಗೊಳ್ಳುವುದರೊಂದಿಗೆ ಮುಕ್ತಾಯವಾಯಿತು. ನಂತರದಲ್ಲಿ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮೀಜಿಗಳು ಎಲ್ಲರಿಗೂ ರುದ್ರಾಕ್ಷಿ ಧಾರಣೆ ಮಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶ್ರೀ. ಶಂಕರ ಗುಡಸ, ಶ್ರೀ. ಬಸವರಾಜ್ ರೊಟ್ಟಿ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀ. ಮಹಾಂತೇಶ್ ಗುಡಸ, ಶ್ರೀ. ರಾಜು ಪದ್ಮಣ್ಣವರ, ಶ್ರೀ. ಶಿವಾನಂದ ವಾಗರವಾಡಿ, ಶ್ರೀ ಸಂಜು ಮರಡಿ ಹಾಗೂ ಬಸವಾದಿ ಪ್ರಮುಖರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ