ಬೆಂಗಳೂರು : ಋಷಿಕುಮಾರ ಸ್ವಾಮಿ ಮುಖಕ್ಕೆ ಕಿಡಿಗೇಡಿಗಳು ಮಸಿ ಬಳಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರದ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ಋಷಿಕುಮಾರಸ್ವಾಮೀಜಿಗೆ ಕಿಡಿಗೇಡಿಗಲು ಬಸಿ ಬಳಿದು ಪರಾರಿಯಾಗಿದ್ದಾರೆ.
ನಾಡಪ್ರಭು ಕೆಂಪೇಗೌಡ, ಕುವೆಂಪು ವಿರುದ್ಧ ಹೇಳಿಕೆ ನೀಡಿದ್ದೀರಿ ಎಂದು ಆರೋಪಿಸಿ ಸ್ವಾಮೀಜಿ ಮುಖಕ್ಕೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ಋಷಿಕುಮಾರ ಸ್ವಾಮೀಜಿ ಇಂದು ಮಲ್ಲೇಶ್ವರ ಠಾಣೆಗೆ ದೂರು ನೀಡಲಿದ್ದಾರೆ.