ಹುಬ್ಬಳ್ಳಿ; ತಂದೆ ಮೊಬೈಲ್ ಗೆ ಕರೆನ್ಸಿ ಹಾಕಲಿಲ್ಲವೆಂದು ಗೊರಪ್ಪನ ವೇಷ ತೊಟ್ಟು ತ್ರಿಶೂಲವನ್ನ ತರಡಿನಲ್ಲಿ ಸಿಕ್ಕಿಸಿಕೊಂಡ ಯುವಕ ನೋರ್ವ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪ್ರಕರಣವೊಂದು ಧಾರವಾಡ ತಾಲೂಕಿನ ನವಲೂರ ಗ್ರಾಮದಲ್ಲಿ ನಡೆದಿದೆ.
ನವಲೂರಿನ 20 ವರ್ಷದ ಮೈಲಾರಿ ತಿಪ್ಪಣ್ಣವರ ಎಂಬಾತನೇ ತ್ರಿಶೂಲವನ್ನ ತರಡಿನಲ್ಲಿ ಸಿಕ್ಕಿಸಿಕೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಿಕಿತ್ಸೆ ಪಡೆಯುತ್ತಿರುವ ಮೈಲಾರಿ ಮೊಬೈಲ್ ಕರೆನ್ಸಿ ಹಾಕುವಂತೆ ತಂದೆಗೆ ಮೈಲಾರಿ ಕೇಳಿಕೊಂಡನಂತೆ. ಆದರೆ, ತಂದೆ ಇದಕ್ಕೆ ಒಪ್ಪಿಕೊಂಡಿಲ್ಲ. ಇದರಿಂದ ರೋಸಿ ಹೋದ ಮೈಲಾರಿ, ಗೊರಪ್ಪನ ಉಡುಪು ಹಾಕಿಕೊಂಡು ಜೊತೆಗೆ ತ್ರಿಶೂಲವನ್ನ ತೆಗೆದುಕೊಂಡು ಹೋಗಿ, ಆ ಜಾಗದಲ್ಲಿ ಸಿಗಿಸಿಕೊಂಡು ನಿತ್ರಾಣವಾಗಿ ಬಿದ್ದಿದ್ದಾನೆ.