ಬೆಂಗಳೂರು, ಮೇ 12: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಮತ್ತು ಗಾಳಿ ಬೀಸುತ್ತಿದ್ದು, ನಗರದ ಜನಪ್ರಿಯ ಸಸ್ಯಶಾಸ್ತ್ರೀಯ ಅದ್ಭುತ – ಕೆಂಗೇರಿ ಬಳಿಯ ಮೈಸೂರು ರಸ್ತೆಯ ಕೇತೋಹಳ್ಳಿಯಲ್ಲಿರುವ ದೊಡ್ಡ ಆಲದ ಮರವು ನೆಲಸಮವಾಗಿದೆ.
ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮರದ ಒಂದು ಭಾಗ ಭಾನುವಾರ ಸಂಜೆ ಜೋರಾದ ಗಾಳಿಗೆ ಬುಡಮೇಲಾಗಿದ್ದು, ಬುಧವಾರದಂದು ಮತ್ತೊಂದು ಪ್ರಮುಖ ಭಾಗ ವಾಲಿಕೊಂಡಿರುವುದು ಕಂಡು ಬಂದಿದ್ದು, ಎಚ್ಚರಿಕೆ ಗಂಟೆ ಬಾರಿಸಿದೆ.
ಇದು ಟೆಕ್ ಕ್ಯಾಪಿಟಲ್‌ನಲ್ಲಿರುವ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ತೋಟಗಾರಿಕಾ ಅಧಿಕಾರಿಗಳ ಪ್ರಕಾರ, 400 ವರ್ಷ ಹಳೆಯದಾದ ದೊಡ್ಡ ಆಲದ ಮರ ಎಂದೂ ಕರೆಯಲ್ಪಡುವ ಆಲದ ಮರದ ಒಂದು ಭಾಗವು ಭಾನುವಾರ ತಡರಾತ್ರಿ ಕುಸಿದಿದೆ. ಈ ಬಗ್ಗೆ ಕೇತೋಹಳ್ಳಿಯ ತೋಟಗಾರಿಕೆ ಸಹಾಯಕ ಕೇಶವಮೂರ್ತಿ ಮಾತನಾಡಿ, ‘ಅದೃಷ್ಟವಶಾತ್ ತಡರಾತ್ರಿ ಈ ಘಟನೆ ನಡೆದಿದೆ. ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾರೀ ಗಾಳಿಯಿಂದಾಗಿ, 60 ಅಡಿ ಎತ್ತರದ ಮರದ ಪ್ರಮುಖ ಭಾಗವು ಪ್ರವಾಸಿಗರ ಮನರಂಜನೆಗಾಗಿ ನಿರ್ಮಿಸಲಾದ ಮೊಗಸಾಲೆಯ ಮೇಲೆ ಬಿದ್ದಿದೆ. ಕಟ್ಟಡ ಸಂಪೂರ್ಣ ಹಾಳಾಗಿದೆ’ ಎಂದರು.
ಒಂದೇ ಮರವು 250 ಮೀಟರ್‌ಗಿಂತಲೂ ಹೆಚ್ಚು ಸುತ್ತಳತೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2000ರಲ್ಲಿ ಸೋಂಕಿನಿಂದಾಗಿ ಐತಿಹಾಸಿಕ ಮರದ ಮುಖ್ಯ ಬೇರು ನಾಶವಾದರೆ, ಇತರ ಭಾಗಗಳು ಹಾಗೇ ಮತ್ತು ಆರೋಗ್ಯಕರವಾಗಿದ್ದವು. ಭಾನುವಾರದ ಘಟನೆಯ ನಂತರ, ಸ್ಥಳೀಯರು ಅಧಿಕಾರಿಗಳು ಹುಲ್ಲು ಹಾಕಲು ಪ್ರದೇಶದಲ್ಲಿ ಅಗೆಯುವ ಕೆಲಸವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ಹುಲ್ಲಿನ ಸಸಿಗಳನ್ನು ನೆಡಲು ಮರದ ಸುತ್ತಲಿನ ಎರಡು ಇಂಚು ಭೂಮಿಯನ್ನು ಗೊತ್ತು ಮಾಡಿದ್ದೇವೆ ಎಂದು ತೋಟಗಾರಿಕಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.