ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ, ಈ ನಡುವೆ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು ಎಂಬ ಕಾರಣಕ್ಕೆ ಅಶ್ವತ್ಥ ನಾರಾಯಣ ಅವರು ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ ಅಂಥ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು.
ಈ ನಡುವೆ ಈ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಅವರು ಟ್ವಿಟ್‌ನಲ್ಲಿ ಎಂಬಿ ಪಾಟೀಲ್ ಪರ ಬ್ಯಾಟ್ ಬೀಸಿದ್ದು, ಡಿಕೆ ಶಿವಕುಮಾರ್‌ಗೆ ಚಾಟಿ ಬೀಸಿದ್ದಾರೆ.
ಹಾಗಾದ್ರೇ ರಮ್ಯಾ ಹೇಳಿರುವುದು ಏನು?
ಪಕ್ಷಾತೀತವಾಗಿ ಜನರು ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರು ಮದುವೆಯಾಗುವುದರ ಮೂಲಕ ಸಂಬಂಧ ಬೆಳಸುತ್ತಾರೆ, ಡಿಕೆ ಶಿವಕುಮಾರ್ ಅವರ ಹೇಳಿಕೆ ನನಗೆ ಆಶ್ವರ್ಯ ಮೂಡಿಸಿದೆ. ಡಿ.ಕೆ. ಶಿವಕುಮಾರ್‌ವರೇ ನಿಮಗೆ ಇದರ ಬಗ್ಗೆ ಹೀಗೆ ಹೇಳಬಯಸುತ್ತೇನೆ ಎಂಬಿಪಾಟೀಲ್ ಅವರು ನಿಷ್ಠಾವಂತ ಕಾಂಗ್ರೆಸ್ಸಿಗರು. ಪಕ್ಷವು ಒಂದು ಘಟಕವಾಗಿ ಚುನಾವಣೆಗಳನ್ನು ಎದುರಿಸಬೇಕಲ್ಲವೇ? ಅಂತ ಅವರು ಟಾಂಗ್ ನೀಡಿದ್ದಾರೆ.
Laxmi News 24×7