Breaking News

ಬಿಜೆಪಿ ಕಾರ್ಯಕರ್ತ ಧರ್ಮಸ್ಥಳದಲ್ಲಿ ನಿಧನ

Spread the love

ಬೆಳ್ತಂಗಡಿ : ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾಮಂದಿರದ ಮಾಲೀಕರಾಗಿರುವ ಡಾ. ನರೇಂದ್ರ ಕುಮಾರ್(45) ಧರ್ಮಸ್ಥಳದಲ್ಲಿ ನಿಧನರಾಗಿದ್ದಾರೆ.

ಬೆಂಗಳೂರಿನ ಯಲಹಂಕ ಮತ್ತು ಬಂಡಿಕೊಡಿಗೆಹಳ್ಳಿಯಲ್ಲಿರುವ ಶ್ರೀ ಜ್ಞಾನಕ್ಷಿ ವಿದ್ಯಾ ಮಂದಿರದ‌ ಮಾಲೀಕ ಹಾಗೂ ಬೆಂಗಳೂರು ಉತ್ತರ ವಲಯದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ.

ನರೇಂದ್ರ ಕುಮಾರ್(45) ನಿನ್ನೆ ಬೆಂಗಳೂರಿನಿಂದ ತಮ್ಮ ಶಾಲೆಯ ಶಿಕ್ಷಕಿಯರನ್ನು ಪುತ್ತೂರು ವಿವೇಕಾನಂದ ಕಾಲೇಜಿಗೆ ತರಬೇತಿಗಾಗಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಸ್ನೇಹಿತರೊಂದಿಗೆ ಟಿ.ಟಿ. ವಾಹನಲ್ಲಿ ಕರೆದುಕೊಂಡು ಬಂದಿದ್ದರು.

ಶಿಕ್ಷಕಿಯರನ್ನು ವಿವೇಕಾನಂದ ಕಾಲೇಜಿಗೆ ಬಿಟ್ಟು ಪತ್ನಿ ಮಕ್ಕಳು ಸೇರಿ ಒಟ್ಟು ಏಳು ಜನರು ಧರ್ಮಸ್ಥಳ ಸನ್ನಿಧಿ ಗೆಸ್ಟ್ ನಲ್ಲಿ ರೂಂ ಮಾಡಿದ್ದರು, ಧರ್ಮಸ್ಥಳ ಕ್ಷೇತ್ರ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ ಪಡೆದು ವಾಪಸ್ ಬೆಂಗಳೂರಿಗೆ ಹೋಗುವುದಾಗಿ ನಿರ್ಧರಿಸಿದ್ದರು. ಇಂದು ಬೆಳಗ್ಗೆ ಏಕಾಏಕಿ ಡಾ.ನರೇಂದ್ರ ಕುಮಾರ್ ಗೆ ಎದೆನೋವು ಕಾಣಿಸಿದೆ. ಕೂಡಲೇ ಟಿ.ಟಿ. ಚಾಲಕನಿಗೆ ಮಕ್ಕಳು ಕರೆ ಮಾಡಿ ವಿಷಯ ತಿಳಿಸಿದಾಗ ಗೆಸ್ಟ್ ಹೌಸ್ ಗೆ ಚಾಲಕ ವಾಹನ ತಂದಾಗ ಡಾ.ನರೇಂದ್ರ ಕುಮಾರ್ ನಡೆದುಕೊಂಡು ಬಂದು ವಾಹನ ಹತ್ತಿ ಕುಳಿತಿದ್ದಾರೆ. ಆದರೆ ನೇತ್ರಾವತಿ ಬಳಿ ಬರುತ್ತಿದ್ದಾಗ ವಾಹನದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ