Breaking News

ವಿಜಯ್​ಗೂ ಚಮಕ್​ ಕೊಟ್ರಾ ಚರಿಷ್ಮಾ ಸುಂದರಿ?

Spread the love

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದೇವರಕೊಂಡ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾರೀ ಸುದ್ದಿಯಾಗಿದ್ದಾರೆ.

ವಿಜಯ್​ ದೇವರಕೊಂಡ ಹುಟ್ಟುಹಬ್ಬ ಆಚರಣೆಗೂ ರಶ್ಮಿಕಾ ಸುದ್ದಿಯಾಗುವುದಕ್ಕೂ ಏನು ಸಂಬಂಧ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ವಿಜಯ್​ ಮತ್ತು ರಶ್ಮಿಕಾ ತುಂಬಾ ಆತ್ಮೀಯರು. ಅಲ್ಲದೆ, ವಿಜಯ್ ಜತೆ ಆಗಾಗ ಹೋಟೆಲ್​ ಹಾಗೂ ಪ್ರವಾಸಿ ತಾಣಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಈ ವರ್ಷ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾತಿ ಹಬ್ಬ ಕೂಡ ಆಚರಿಸಿದ್ದರು. ಅಲ್ಲದೆ, ಹೊಸ ವರ್ಷದಂದು ವಿಜಯ್​ ಕುಟುಂಬದ ಜತೆ ಗೋವಾದಲ್ಲಿ ರಶ್ಮಿಕಾ ವರ್ಷಾಚಾರಣೆ ಮಾಡಿದ್ದರು. ವಿಜಯ್​ಗಾಗಿ ಒಮ್ಮೆ ಅಮೆರಿಕಕ್ಕೂ ರಶ್ಮಿಕಾ ಪ್ರವಾಸ ಮಾಡಿದ್ದರು. ಇಷ್ಟೊಂದು ಆತ್ಮೀಯಳಾಗಿದ್ದ ರಶ್ಮಿಕಾ, ಇದೀಗ ವಿಜಯ್​ ಬರ್ತಡೇಗೆ ಒಂದೇ ಒಂದು ಶುಭ ಕೋರಿಲ್ಲ ಅಂದರೆ ಅಚ್ಚರಿಯಲ್ಲದೇ ಮತ್ತೇನು? ಈ ಕಾರಣದಿಂದಲೇ ರಶ್ಮಿಕಾ ಇದೀಗ ಭಾರೀ ಸುದ್ದಿಯಾಗಿದ್ದಾರೆ.

ರಶ್ಮಿಕಾ ವಿಶ್ ಮಾಡದೇ ಇರೋದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ರಶ್ಮಿಕಾ ಮತ್ತು ವಿಜಯ್ ನಡುವೆ ಬಿರುಕು ಮೂಡಿದೆ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೊಂದು ಆತ್ಮೀಯರಾಗಿದ್ದವರೂ ವಿಶ್ ಮಾಡದೇ ಇರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. 


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ