ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಟ್ ನಿಂದಾಗಿ ಬೆಂಗಳೂರಿನ ವಾತಾವರಣ ಕಂಪ್ಲೀಟ್ ಕೂಲ್ ಆಗಿದೆ. ಇಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮೋಡದ ಮರೆಯಲ್ಲೇ ಸೂರ್ಯ ದೇವನ ಜಾರಿಹೋಗಲಿದ್ದಾನೆ.
ಬಂಗಾಳಕೊಲ್ಲಿಯನ್ನ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸನಿ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದ ಹಲವು ಕಡೆ ಜೋರು ಮಳೆ ಆಗ್ತಿದೆ. ಬೆಂಗಳೂರಿನಲ್ಲೂ ಚಂಡಮಾರುತದ ಪರಿಣಾಮ ಬೇಸಿಗೆ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದೆ. ನಗರದಲ್ಲಿ ನೆನ್ನೆಯಿಂದಲೂ ಸಹ ಮೋಡ ಕವಿದ ವಾತಾವರಣವಿದೆ. ನಿನ್ನೆ ನಗರದ ಬಹು ಭಾಗಗಳಲ್ಲಿ ಗಾಳಿ ಜೊತೆಗೆ ತುಂತುರು ಮಳೆ ಆಗಿತ್ತು. ಇಂದು ಸಹ ಅಂತಹದ್ದೆ ಪರಿಸ್ಥಿತಿ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Laxmi News 24×7