Kalaburagi: ಅಜಾನ್ ವಿರುದ್ಧ ಕೆಲವು ಹಿಂದೂ ಸಂಘಟನೆಗಳ ಪ್ರತಿಭಟನೆ ಸೋಮವಾರದಿಂದ ಹೆಚ್ಚಾಗಿದೆ.
ರಾಜ್ಯದ ಹಲವಾರು ಭಾಗಗಳ ಹಿಂದೂ ದೇವಸ್ಥಾನಗಳಲ್ಲಿ (Hindu temples) ಸುಪ್ರಭಾತ ಮತ್ತು ಹನಮಾನ್ ಚಾಲಿಸಾ (Hanuman Chalisa) ಧ್ವನಿವರ್ಧಕಗಳ ಮೂಲಕ ಪಠಿಸಲಾಗುತ್ತಿದೆ. ಹಾಗಾಗಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಯಾನ್ ಬಾಜಿ ಶುರುವಾಗಿದೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ (BK Hari Prasad) ಅವರು ಅಜಾನ್ ವಿರುದ್ಧ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು ಅಂತ ಹೇಳಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಪಕ್ಷದ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮ್ಮ ಪಕ್ಷದವರನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ ಇನ್ನು ವಿರೋಧ ಪಕ್ಷದವರನ್ನು ಬಿಟ್ಟಾರೆಯೇ? ಕಲಬುರಗಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್ ಅವರು ಹರಿಪ್ರಸಾದ ಒಬ್ಬ ಆಂತರಿಕ ಭಯೋತ್ಪಾದಕ, ಹಿಂದೆ ಅವನು ಬೆಂಗಳೂರಿನ ಗೂಂಡಾ ಆಗಿದ್ದ ಎಂದರು.
‘ಅಸಲಿಗೆ, ಸಿದ್ದರಾಮಯ್ಯ ಅವರೊಬ್ಬರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಗೂಂಡಾಗಳು, ಸೋನಿಯಾ ಗಾಂಧಿ ಅವರು ಪಕ್ಷವನ್ನು ಗೂಂಡಾಗಳ ಕೈಗೊಪ್ಪಿಸಿ ನಿದ್ರೆ ಮಾಡುತ್ತಿದ್ದಾರೆ’ ಎಂದು ಯತ್ನಾಳ್ ಹೇಳಿದರು.