ಬಾಗಲಕೋಟೆ, ಮೇ 09; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದರು. ಬಾದಾಮಿ ಕ್ಷೇತ್ರದ ಹಾಲಿ ಶಾಸಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.
ಸೋಮವಾರ ಎಚ್. ಡಿ. ಕುಮಾರಸ್ವಾಮಿ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದರು.
2023ರ ಚುನಾವಣೆಗೆ ಬಾದಾಮಿಯಿಂದ ಹನುಮಂತ ಮಾವಿನಮರದ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದರು.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ, ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಾದಾಮಿಯಲ್ಲಿ ಗೆಲುವು ಸಾಧಿಸಿದ್ದರು. ಚಾಮುಂಡೇಶ್ವರಿಲ್ಲಿ ಸೋಲು ಕಂಡಿದ್ದರು.
ಹನುಮಂತ ಮಾವಿನಮರದ್ ಕಳೆದ ಚುನಾವಣೆಯಲ್ಲಿಯೂ ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರಾಳಿಯಾಗಿದ್ದರು. 24,484 ಮತಗಳನ್ನು ಪಡೆದಿದ್ದರು.