Breaking News

ಮನುಕುಲವೇ ತಲೆತಗ್ಗಿಸುವ ಘನಘೋರ ಕೃತ್ಯ: ಬಾಲಕಿಯ ಶವವನ್ನು ಹೊರಕ್ಕೆ ತೆಗೆದು 17 ಮಂದಿ ಗ್ಯಾಂಗ್‌ ರೇಪ್‌!

Spread the love

ಇಸ್ಮಾಮಾಬಾದ್: ಮನುಷ್ಯರು ಕ್ರೂರ ಮೃಗಗಳಿಗಿಂತಲೂ ಕ್ರೂರವಾಗುತ್ತಿರುವ ಹಲವಾರು ಘಟನೆಗಳು ನಡೆಯುತ್ತಲೇ ಇವೆ, ಅದರಲ್ಲಿಯೂ ಕೊಲೆ, ಅತ್ಯಾಚಾರದಂಥ ಪ್ರಕರಣ ವರದಿಯಾದಾಗ ಮನುಷ್ಯನ ಕ್ರೂರ ಮುಖಗಳು ಅನಾವರಣಗೊಳ್ಳುತ್ತಿವೆ. ಅಂಥದ್ದೇ ಒಂದು ಭಯಾನಕ ಕೃತ್ಯ ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ನಡೆದಿದೆ.

 

ಬಾಲಕಿಯೊಬ್ಬಳ ಶವವನ್ನು ಸಮಾಧಿಯಿಂದ ಹೊರಕ್ಕೆ ತೆಗೆದು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ಇದಾಗಿದೆ. ಸುಮಾರು 17 ಮಂದಿ ಸೇರಿ ಈ ರೇಪ್‌ ಮಾಡಿದ್ದಾರೆ ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.

ಮೃತ ಬಾಲಕಿಯ ಸಂಬಂಧಿಕರು ಶವವನ್ನು ತಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಹೂಳಿಹೋಗಿದ್ದಾರೆ. ಮರುದಿನ ಬೆಳಿಗ್ಗೆ ಸ್ಮಶಾನಕ್ಕೆ ಭೇಟಿ ನೀಡಿದಾಗ ಮೃತದೇಹ ಸಮಾಧಿಯಿಂದ ಹೊರಕ್ಕೆ ಬಿದ್ದಿರುವುದು ಕಂಡಿದೆ. ಸ್ಮಶಾನದಿಂದ ಸುಮಾರು 200 ಚದರ ಅಡಿ ದೂರದಲ್ಲಿ ಮೃತದೇಹ ಬಿದ್ದಿತ್ತು. ನಂತರ ಹೆದರಿಕೊಂಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಬಳಿಕ ಸುಮಾರು 17 ಮಂದಿ ಸೇರಿ ಈಕೆಯ ಮೇಲೆ ಗ್ಯಾಂಗ್‌ರೇಪ್‌ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ 17 ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ವೈಜ್ಞಾನಿಕ ವಿಧಾನಗಳ ಪ್ರಕಾರ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್‌ಎನ್) ಉಪ ಕಾರ್ಯದರ್ಶಿ ಅತ್ತಾವುಲ್ಲಾ ತರಾರ್ ತಿಳಿಸಿದ್ದು, ಈ ಕುರಿತು ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಬಾಲಕಿಯ ಚಿಕ್ಕಪ್ಪ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.


Spread the love

About Laxminews 24x7

Check Also

ಹುಬ್ಬಳ್ಳಿ ಧಾರವಾಡ ಪಾಲಿಕೆಯಿಂದ ಪರಿಸರ ಸ್ನೇಹಿ ಗಣೇಶ ಅಭಿಯಾನ: ವಿಜೇತರಿಗೆ ಸಿಗಲಿದೆ ಬಹುಮಾನ

Spread the loveಹುಬ್ಬಳ್ಳಿ, ಆಗಸ್ಟ್​ 26: ರಾಜ್ಯ ಸರ್ಕಾರ ಪಿಓಪಿ ಗಣೇಶ (POP Ganesha) ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ