ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನೇ ಮಾಡಿದರೂ ಅಂಜುವ ಮಗ ನಾನಲ್ಲ. ನಾನು ಅಂಜಿ ರಾಜಕಾರಣ ಮಾಡಲ್ಲ. ಡಿಕೆಶಿಗೆ ನನ್ನ ಭಯ ಹುಟ್ಟಿದೆ. ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತದೆ ಎನ್ನುವ ಭಯ ಶುರುವಾಗಿದೆ ಎಂದು ಡಿಕೆಶಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಆಗಲು ಹೈಕಮಾಂಡ್ ಹಣ ನೀಡಬೇಕಾಗುತ್ತದೆ ಎಂದು ನಾನು ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಸಿಎಂ ಮಾಡುತ್ತೇವೆ ಎಂದು ಯಾರೋ ವಾಟ್ಸಪ್ ಕಾಲ್ ಮಾಡುತ್ತಾರೆ. ನಮಗೆ ಮೋದಿ ಗೊತ್ತು, ಸೋನಿಯಾ ಗಾಂಧಿ ಗೊತ್ತು, ದೇವೇಗೌಡ್ರು ಗೊತ್ತು ಎಂದು ಹೇಳುತ್ತಾರೆ. ವ್ಯವಸ್ಥೆ ಹಾಗಿದೆ. ಅವರನ್ನು ನಂಬಬೇಡಿ ಎಂದು ಹೇಳಿದ್ದೇನೆ ಎಂದರು
ದೆಹಲಿ ಸಾಧು ಒಬ್ಬ, ತಾನು ಕೇದಾರ ಮಹಾರಾಜ ಮಾತಾಡೋದು, ನನಗೆಲ್ಲರೂ ಗೊತ್ತು. ಇಷ್ಟು ಹಣ ತಂದು ಕೊಟ್ಟರೆ ಶಿಫಾರಸ್ಸು ಮಾಡುತ್ತೇನೆ ಎನ್ನುತ್ತಾರೆ. ಇದೆಲ್ಲಾ ರೆಕಾರ್ಡ್ ಇಟ್ಟುಕೊಳ್ಳಲು ಆಗುವುದಿಲ್ಲ. ರೆಕಾರ್ಡ್ ಇಟ್ಟು ರಾಜಕೀಯ ಮಾಡುವುದಕ್ಕೂ ಆಗುವುದಿಲ್ಲ ಎಂದು ತಿಳಿಸಿದರು.