ಮೈಸೂರು: ಕವಲಂದೆಯನ್ನು ಚೋಟಾ ಪಾಕಿಸ್ತಾನ್ ಎಂಬ ಆಡಿಯೋ ವೈರಲ್ ಪ್ರಕರಣ ಸಂಬಂಧ ಆರೋಪಿಗಳ ಕೃತ್ಯವನ್ನು ಸ್ಥಳೀಯ ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ.
ಭಾರತ ನಮ್ಮ ದೇಶ, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಬದುಕುತ್ತೇವೆ. ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಘಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಸ್ಲಿಂ ಮುಖಂಡರು, ಇದು ನಾವು ಹುಟ್ಟಿ ಬೆಳೆದ ದೇಶ, 8-10 ತಲೆಮಾರುಗಳಿಂದ ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಭಾರತ ಒಂದು ಸುಂದರವಾದ ಬೊಂಬೆಯಂತೆ. ಘಟನೆ ಹಿಂದೆ ಯಾರ ಕುಮ್ಮಕ್ಕೂ ಇಲ್ಲ, ನಮ್ಮ ಬೆಂಬಲವೂ ಇಲ್ಲ. ಪಾಕಿಸ್ತಾನದ ಹೆಸರನ್ನು ನಾವು ಯಾವುದೇ ಕಾರಣಕ್ಕೂ ಬಳಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಚೋಟಾ ಪಾಕಿಸ್ತಾನ್ ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆಈ ವಿಚಾರ ನಮಗೆ ಗೊತ್ತಿಲ್ಲ, ಗೊತ್ತಾಗಿದ್ದರೆ ಅಲ್ಲೇ ಆರೋಪಿಗಳಿಗೆ ಬಾರಿಸುತ್ತಿದ್ದೆವು.