Breaking News

ನನಗೆ 90 ವರ್ಷ ಆಯ್ತು ವಿಶ್ರಾಂತಿ ಬೇಕು: ಮಾಜಿ ಸಿಎಂ ಎಸ್ ಎಂ ಕೃಷ್ಣ

Spread the love

 

ಬೆಂಗಳೂರು: ಚಿತ್ರಕಲಾ ಪರಿಷತ್​​ನಲ್ಲಿ ಇಂಡಿಯನ್ ಆರ್ಟ್ ಫೆಸ್ಟಿವಲ್ ಇಂದಿನಿಂದ ಶುರುವಾಗಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಾಲನೆ ಕೊಟ್ಟರು. ಬಳಿಕ ಮಾತಾನಾಡಿದ ಅವರು, ಕಲಾಕೃತಿಗಳು ಕಣ್ಣಿಗೆ ಹಾಗೂ ಮನಸ್ಸಿಗೆ ನೆಮ್ಮದಿ, ಸಂತೋಷ ಕೊಡುತ್ತವೆ. ನಮ್ಮ ದೇಶದ ಪ್ರಸಿದ್ಧ ಕಲಾವಿದರು, ಹೆಸರು ಮಾಡಿರುವ ಕಲಾವಿದರು ಬಂದಿದ್ದು, ಅವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಈ ಕಲಾಕೃತಿಗಳನ್ನು ನೋಡಲು ಸಂತೋಷವಾಗ್ತಿದೆ ಎಂದರು.

ಈಗಿನ ರಾಜಕೀಯದಲ್ಲಿ ಆಗ್ತಿರುವ ಬೆಳವಣಿಗೆ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ 90 ವರ್ಷ ಆಯ್ತು, ಸದ್ಯಕ್ಕೆ ವಿಶ್ರಾಂತಿ ಬೇಕು ಎಂದರು. ಈ ಭಾರತ ಕಲಾ ಉತ್ಸವದಲ್ಲಿ ದೇಶದ ಪ್ರತಿಷ್ಠಿತ 25 ಕಲಾ ಗ್ಯಾಲರಿಗಳು ಮತ್ತು 100ಕ್ಕೂ ಅಧಿಕ ಖ್ಯಾತ ಕಲಾವಿದರು ಹಾಗೂ 300 ಉತ್ಸಾಹಿ ಮತ್ತು ಯುವ ಕಲಾವಿದರು ಭಾಗವಹಿಸಿದ್ದಾರೆ.


Spread the love

About Laxminews 24x7

Check Also

ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು- ಬಿವೈವಿ

Spread the love ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ. ಯಾವುದೇ ದೂರದೃಷ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ