ಬೆಂಗಳೂರು/ ಕಲಬುರಗಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ 545 ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಡಿವೈಎಸ್ಪಿ, ಇನ್ಸ್ಪೆಕ್ಟರ್ನನ್ನು ಸಿಐಡಿ ಕೊನೆಗೂ ಬಂಧಿಸಿದೆ. ಈ ಇಬ್ಬರಿಗೂ ಕೋಳ ತೊಡಿಸುವ ಮೂಲಕ ಬಂಧಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.
ರಾಯಚೂರು ಜಿಲ್ಲೆ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್ಸ್ಪೆಕ್ಟರ್ ಆನಂದ ಮೇತ್ರೆನನ್ನು ಕಲಬುರಗಿಯಲ್ಲಿ ವಿಚಾರಣೆಗಾಗಿ ಕರೆದು ಬಂಧಿಸಲಾಗಿದೆ. ಅದೇ ರೀತಿ ಮೈಸೂರು ರಸ್ತೆ ಕುಂಬಳಗೋಡು ಠಾಣೆ ಕಾನ್ಸ್ಟೇಬಲ್ ಸೋಮನಾಥ್ ಮತ್ತು ಕೆಂಗೇರಿ ಹೋಬಳಿ ಚಿನ್ನಕುರ್ಚಿ ಗ್ರಾಮದ ಸಿ.ಜಿ. ರಾವೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಎಐಆರ್ಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ 15 ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರಗಿಯಲ್ಲಿ 31 ಆರೋಪಿಗಳು ಸೇರಿ ರಾಜ್ಯದಲ್ಲಿ ಒಟ್ಟಾರೆ 46 ಮಂದಿಯನ್ನು ಸಿಐಡಿ ಬಲೆಗೆ ಬಿದ್ದಿದ್ದಾರೆ. ಇದರಲ್ಲಿ 9 ಮಂದಿ ಪೊಲೀಸರಿದ್ದಾರೆ.
ಮೈಸೂರು ರಸ್ತೆ ಕೆಂಗೇರಿ ಹೋಬಳಿ ಕುಂಬಳಗೋಡು ಸಮೀಪದ ಚಿನ್ನಕುರ್ಚಿ ಗ್ರಾಮದ ಸಿ.ಎಂ. ನಾಗರಾಜ್, ಈತನ ಸಹೋದರ ಸಿ.ಎಂ. ನಾರಾಯಣ ಹಾಗೂ ಸಿ.ಜಿ. ರಾವೇಂದ್ರ ವಿರುದ್ಧ ಒಎಂಆರ್ ಶೀಟ್ ತಿದ್ದಿದ ಆರೋಪದ ಮೇಲೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ನಾಗರಾಜನನ್ನು ಬಂಧಿಸಲಾಗಿತ್ತು. ಗುರುವಾರ ರಾವೇಂದ್ರನನ್ನು ಬಂಧಿಸಿದ್ದು, ನಾರಾಯಣ ಪತ್ತೆಗೆ ಬಲೆಬೀಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಸರ್ಕಾರಿ ಕೆಲಸಕ್ಕೆ ಸಿದ್ಧತೆ ನಡೆಸಿದ್ದ ಸಹೋದರರು ಎಸ್ಐ ನೇಮಕಾತಿ ವಿಚಾರ ತಿಳಿದು ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿ ಮೂಲಕ ಎಸ್ಐ ಹುದ್ದೆಯ ಡೀಲ್ ಕುದುರಿಸಿದ್ದರು. ಊರಿನಲ್ಲಿ ಕುಟುಂಬಕ್ಕಿದ್ದ 1 ಎಕರೆ ಜಮೀನನ್ನು ಮಾರಾಟ ಮಾಡಿ ಹಣ ಕೊಟ್ಟಿದ್ದರು. ಬೆಂಗಳೂರಿನ ಪರೀಾ ಕೇಂದ್ರದಲ್ಲಿ ಮೂವರು ಲಿಖಿತ ಪರೀೆ ಬರೆದಿದ್ದರು. ಮೂವರೂ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.