ಮಂಗಳೂರು: ರಾಜ್ಯ ಕರಾವಳಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಹಿಂದೂಪರ ಸಂಘಟನೆಗಳ ಆರೋಪದ ನಡುವೆಯೇ ಲವ್ ಜಿಹಾದ್‍ಗೆ ಪುಷ್ಟಿ ನೀಡುವ ಹಲವು ಘಟನೆಗಳು ವರದಿಯಾಗುತ್ತಿದೆ. ಇಂಥಹ ಘಟನೆಗಳ ಸಾಲಿಗೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಎಂಬಲ್ಲಿ ನಡೆದ ಘಟನೆಯೂ ಸೇರಿಕೊಂಡಿದೆ.
ಕಣಿಯೂರು ಮಸೀದಿಯ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ದಂಪತಿಯ 14 ವರ್ಷದ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಅಪ್ರಾಪ್ತೆಯ ಸಾವಿಗೆ ಅನ್ಯಕೋಮಿನ ಯುವಕ ಕಾರಣ ಎಂದು ಬಾಲಕಿ ಪೋಷಕರು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.