ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವಂತ 84 ಗ್ರಾಮಲೆಕ್ಕಿಗರ ಹುದ್ದೆಗಳನ್ನು ( Village Accountant ) ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು, ಸರ್ಕಾರ ಅನುಮತಿ ನೀಡಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಬಂಧ ಪಟ್ಟಂತ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಖಾಲಿ ಇರುವಂತ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ( VA Recruitment ) ಮೂಲಕ ಭರ್ತಿ ಮಾಡಿಕೊಳ್ಳು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.
ಹುದ್ದೆಗಳ ವಿವರ
- ಕೋಲಾರ – 11 ಹುದ್ದೆ
- ತುಮಕೂರು – 13 ಹುದ್ದೆ
- ಚಿಕ್ಕಬಳ್ಳಾಪುರ – 10 ಹುದ್ದೆ
- ಚಿತ್ರದುರ್ಗ – 11 ಹುದ್ದೆ
- ಕೊಡಗು – 13 ಹುದ್ದೆ
- ಉತ್ತರ ಕನ್ನಡ – 26 ಹುದ್ದೆ
ಇನ್ನು ಮುಂದೆ ಯಾವುದೇ ಜಿಲ್ಲೆಗಳಲ್ಲಿ ಮಂಜೂರಾಗಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಪೈಕಿ ಶೇ.85ರಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರದ ಸಹಮತಿ ಇದೆ ಎಂದು ಭಾವಿಸಿ, ಭರ್ತಿ ಮಾಡಲು ಕ್ರಮ ವಹಿಸುವಂತೆ ಹಾಗೂ ನೇಮಕಾತಿ ಆದೇಶ ನೀಡುವ ಮುನ್ನ ಆಯವ್ಯಯದಲ್ಲಿ ಅನುದಾನ ಒದಗಿಸುವ ಸಲುವಾಗಿ ಸರ್ಕಾರದ ಸಹಮತಿ ಪಡೆಯುವಂತೆ ತಿಳಿಸಿದ್ದಾರೆ.
ಈ ಹುದ್ದೆಗಳಿಗೆ ಸಂಬಂಧ ಪಟ್ಟ ಜಿಲ್ಲಾಡಳಿತದಿಂದ ಶೀಘ್ರವೇ ಅರ್ಜಿಯನ್ನು ಕರೆಯಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.