ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಲದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-4ರ ಹುಕ್ಕೇರಿ ತಾಲೂಕಿನ ಸುತಗಟ್ಟಿ ಕ್ರಾಸ್ ಬಳಿ ನಡೆದಿದೆ.
ಒರಿಸ್ಸಾ ಮೂಲದ ವ್ಯಕ್ತಿಗಳಿಬ್ಬರು ಬೈಕ್ ಮೇಲೆ ಬೆಳಗಾವಿ ಕಡೆಯಿಂದ ಮಹಾರಾಷ್ಟ್ರ ಕಡೆಗೆ ಹೋಗುತ್ತಿದ್ದ ವೇಳೆ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಓರಿಸ್ಸಾ ರಾಜ್ಯದ ಬದ್ರಕ ಜಿಲ್ಲೆಯ ದೊಳಾಪಡ ಗ್ರಾಮದ ಬೇನುದರ ನಾಯಕ ಎಂಬಾತ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಇತನ ಜತೆಗಿದ್ದ ಆಸೀತಕುಮಾರ ಮದುಲಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಕಾಕತಿ ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಒಟ್ಟು ನಾಲ್ಕು ಜನರಿದ್ದು, ಮತ್ತಿಬ್ಬರು ಮತ್ತೊಂದ ಬೈಕನಲ್ಲಿದ್ದರು. ಇವರೆಲ್ಲರೂ ಬೆಳಗಾವಿ ತಾಲೂಕಿನ ಅಲತಗೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾಕ್ಟರಿ ಕೆಲಸಕ್ಕೆ ಎಂದು ಬಂದಿದ್ದರು. ಕೆಲಸ ಮುಗಿಸಿ ಮಹಾರಾಷ್ಟ್ರ ಕಡೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ.