Breaking News

ಬಸ್​ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್​ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್​!

Spread the love

ವೇಮುರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರು ಅಪಹರಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತವರಂನಲ್ಲಿ ಸೋಮವಾರ ನಡೆದಿದೆ.

ಆಂಧ್ರ ಪೊಲೀಸರ ಪ್ರಕಾರ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್​ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ.

ಲಕ್ಷ್ಮೀ ಪೂಜಿತಾ ತೆನಾಲಿ ಬಳಿಯ ಇಂಜಿನಿಯರ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಶ್ವನಾಥ್​ ಅದೇ ಕಾಲೇಜಿನಲ್ಲಿ ಬಸ್​ ಚಾಲಕನಾಗಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇಬ್ಬರು ಕಳೆದ ಏಪ್ರಿಲ್​ 11ರಂದು ಮದುವೆ ಆಗಿದ್ದರು. ಆದರೆ, ಈ ಮದುವೆ ಯುವತಿ ಮನೆಯವರಿಗೆ ಇಷ್ಟವಿರಲಿಲ್ಲ. ಇಂಜಿನಿಯರಿಂಗ್​ ಶಿಕ್ಷಣವನ್ನು ಮುಗಿಸದೇ ಪೂಜಿತಾ ಮದುವೆಯಾಗಿದ್ದಳು. ನವದಂಪತಿ ಅನಂತವರಂನಲ್ಲಿ ನೆಲೆಸಿದ್ದರು.

ಸೋಮವಾರ ಬೆಳಗ್ಗೆ ಅನಂತವರಂನಲ್ಲಿರುವ ಪೂಜಿತಾ ಅವರ ಅತ್ತೆ ಮನೆಗೆ ಬಂದ ಅವರ ಅಜ್ಜಿ, ಆಂಟಿ ಮತ್ತು ಅಂಕಲ್​ ತಾಯಿಗೆ ಹುಷಾರಿಲ್ಲ ಎಂದು ಹೇಳಿದ್ದಾರೆ. ಆದರೆ, ಇದನ್ನು ನಂಬಲು ಒಪ್ಪದ ಪೂಜಿತಾ ಅವರೊಂದಿಗೆ ತೆರಳು ನಿರಾಕರಿಸಿದ್ದಾಳೆ. ಇದಾದ ಬಳಿಕ ಪೂಜಿತಾ ಅವರ ತಂದೆ ಶ್ರೀನಿವಾಸ ರೆಡ್ಡಿ, ಸಹೋದರ ನಿರಂಜನ್​ ರೆಡ್ಡಿ ಮತ್ತು ಕೆಲ ಯುವಕರು ಪೂಜಿತಾಳನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ