ಧಾರವಾಡ: ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮನೆಯವರಿಗೆ ರಂಜಾನ್ ಪ್ರಯುಕ್ತ ಶಾಸಕ ಜಮೀರ್ ಅಹ್ಮದ್ ಸಹಾಯ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ನಲಪಾಡ್, ನಾನು ಅದರ ಜೊತೆಗೂ ನಿಂತುಕೊಳ್ಳಲ್ಲ ಎಂದಿದ್ದಾರೆ.
ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಅವರ ವೈಯಕ್ತಿಕ. ಪಕ್ಷದ ಬ್ಯಾನರ್ ನಲ್ಲಿ ಕೊಡುತ್ತಿಲ್ಲ. ಅವರ ವೈಯಕ್ತಿಕವಾಗಿ ಕೊಡುತ್ತಿದ್ದಾರೆ. ಪಕ್ಷದಿಂದ ಕೊಟ್ಟಾಗ ಕಮೆಂಟ್ ಮಾಡಬಹುದು. ನನಗೇನು ಇದು ಸರಿ ಎನ್ನಿಸುತ್ತಿಲ್ಲ. ಅವರಿಗೆ ನಾನು ಕೊಡುತ್ತಿಲ್ಲ. ಅವರ ಜೊತೆಗೂ ನಾನು ನಿಂತುಕೊಳ್ಳಲ್ಲ ಎಂದಿದ್ದಾರೆ.
ಬಂಧಿತರ ಪ್ರತಿ ಕುಟುಂಬಕ್ಕೆ 5 ಸಾವಿರ ರೂಪಾಯಿ ಆರ್ಥಿಕ ಸಹಾಯ ಮತ್ತು ಫುಡ್ ಕಿಟ್ ವಿತರಣೆ ಮಾಡಲಿದ್ದಾರೆ. ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಠಾಣೆ ಹತ್ತಿರದ ಮಸ್ತಾನ್ ಷಾ ಶಾದಿಮಹಲ್ ನಲ್ಲಿ ಈ ಕಿಟ್ ಹಂಚಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮೀರ್, ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಕಾರಣ ತಾಯಂದಿರಿಗೆ, ಪುಟ್ಟ ಮಕ್ಕಳಿಗೆ ಸಹಾಯಯಸ್ತ ಚಾಚಿದ್ದೇನೆ ಎಂದಿದ್ದಾರೆ.
Laxmi News 24×7