ಬೆಳಗಾವಿ : ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ಇದೀಗ ಜಿಲ್ಲೆಯ ಮತ್ತೊಬ್ಬ ಗುತ್ತಿಗೆದಾರ ಬಾಳೆಹೊನ್ನೂರಿನ ಖಾಸಗಿ ಲಾಡ್ಜ್ ನಲ್ಲಿ ನಿಗೂಢವಾಗಿ ಆತ್ಮಹತ್ಯೆಗೆ ಶರಣವಾಗಿರುವ ಘಟನೆ ನಡೆದಿದೆ.
ಬೆಳಗಾವಿ ಮೂಲದ ಬಸವರಾಜ (47) ಆತ್ಮಹತ್ಯೆಗೆ ಶರಣಾದವರು.
ಪಟ್ಟಣದ ಖಾಸಗಿ ಲಾಡ್ಜ್ ವೊಂದರಲ್ಲಿ ಮೂರು ದಿನಗಳ ಹಿಂದೆ ಕೊಠಡಿ ಪಡೆದಿದ್ದ ಬಸವರಾಜ್ ಬುಧವಾರ ಬೆಳಗ್ಗೆ ಕೊಠಡಿಯಿಂದ ಹೊರಬಂದಿದ್ದರು ಎನ್ನಲಾಗಿದ್ದು, ಆ ಬಳಿಕ ಕೊಠಡಿ ಒಳಗೆ ತೆರಳಿದವರು ಪುನಃ ವಾಪಸ್ ಬಂದಿಲ್ಲ. ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲಿಸಿದಾಗ ಕೊಠಡಿಯ ಫ್ಯಾನ್ ಗೆ ಬಸವರಾಜ ನೇಣಿಗೆ ಶರಣಾಗಿದ್ದಾರೆ.
ಗುತ್ತಿಗೆದಾರ ಬಸವರಾಜ್ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಕುಟುಂಬಸ್ಥರು ಬಂದ ಬಳಿಕ ದೂರು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.