ಹಾಸನ: ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ ಎಂಬ ಅಶ್ವತ್ಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ಬಗ್ಗೆ ನಮಗೆ ಗೌರವವಿದೆ. ಅವರು ಬಂದ ಕೂಡಲೇ ಉನ್ನತ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಾರೆ ಅಂದುಕೊಂಡಿದ್ದೆ. ನಾವು ಯಾವುದೇ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಬಿಜೆಪಿ ಐದು ವರ್ಷ ಅಧಿಕಾರದಲ್ಲಿತ್ತು. ಹಾಸನಕ್ಕೆ ಒಂದು ಲ್ಯಾಬ್ ಕೊಟ್ಟಿದ್ದಾರಾ ನೈತಿಕತೆ ಇದ್ದರೆ ಹೇಳಲಿ ಎಂದು ಅಶ್ವತ್ಥ್ ನಾರಾಯಣ್‍ಗೆ ಸವಾಲೆಸೆದಿದ್ದಾರೆ.
ನಾಚಿಕೆಯಾಗಬೇಕು ಇವರಿಗೆ, ಇವರ ಹಗರಣಗಳ ಬಗ್ಗೆ ಸಮಯ ಬಂದಾಗ ಹೇಳ್ತೀನಿ. ನಾನು ಸಾಮಾನ್ಯ ರೈತನ ಮಗ, ಅವರ ಹಾಗೆ ಬಾರ್ ಅಟ್‍ಲಾ ಮಾಡಿಲ್ಲ. ಇಲ್ಲಿ ಬಂದು ಅವನಿಗೆ ನೋಡೋಕೆ ಹೇಳಿ. ಈ ಮಂತ್ರಿಗೆ ಶಿಕ್ಷಣ ಖಾತೆ ಅಂದರೆ ಏನೂ ಅಂತ ಗೊತ್ತೆ ಇಲ್ವೇನೋ. ಖಾಸಗಿಯವರ ಜೊತೆ ಶಾಮೀಲಾಗಿದ್ದಾರೆ. ನಾನು ಹಳ್ಳಿ ಗಮಾಡು ಒಂದನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಬನ್ನಿ ಅಶ್ವತ್ಥ್ ನಾರಾಯಣ್ ಅವರೇ ಹಾಸನ ಜಿಲ್ಲೆಯನ್ನು ನೋಡಿ. ಖಾಸಗಿಯವರ ಗುಲಾಮರಾಗಿ ಕೆಲಸ ಮಾಡಬೇಡಿ ಎಂದು ತಿಳಿಸಿದ್ದಾರೆ.