ಬೆಂಗಳೂರು: ಮಡದಿಯ ಆಸೆ ತೀರಿಸಲು ರಜೆ ಕೇಳಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಇನ್ಸ್ಪೆಕ್ಟರ್ಗೆ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಪತ್ರ ಬರೆದ ಪೇದೆಯ ಹೆಸರು ಆನಂದ್. ಇವರು ಸಿಸಿಬಿ ಆಯಂಟಿ ನಾರ್ಕೋಟಿಕ್ ವಿಂಗ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ವಾಯುವಿಹಾರ ಹಾಗೂ ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕೆಂದು ನನ್ನ ಮಡದಿ ಬಯಸಿದ್ದಾಳೆ. ಅದಕ್ಕಾಗಿ ಒಂದು ದಿನ ವಾರದ ರಜೆ ಕೊಡಿ ಎಂದು ಆನಂದ್, ಇನ್ಸ್ಪೆಕ್ಟರ್ಗೆ ಪತ್ರ ಬರೆದಿದ್ದರು.
ಪತ್ರ ನೋಡಿದ ಇನ್ಸ್ಪೆಕ್ಟರ್ ಆನಂದ್ ಅವರಿಗೆ ರಜೆಯನ್ನು ನೀಡಿದ್ದಾರೆ. ಇದೀಗ ಆನಂದ್ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.